ADVERTISEMENT

ಲಾಲು ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 19:31 IST
Last Updated 10 ಏಪ್ರಿಲ್ 2019, 19:31 IST
   

ನವದೆಹಲಿ: ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ.

‘ಈ ಅರ್ಜಿ ಜಾಮೀನು ನೀಡಲು ಅರ್ಹವಾಗಿಲ್ಲ’ ಎಂದುಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

ಈಗಾಗಲೇ24 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದು, ಜಾಮೀನು ನೀಡಬೇಕೆಂಬ ಲಾಲು ಮನವಿಯನ್ನು ಕೋರ್ಟ್‌ನಿರಾಕರಿಸಿದೆ.ಲಾಲು ಪ್ರಸಾದ್‌ ಅವರಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಅದರಲ್ಲಿ 24 ತಿಂಗಳು ಏನೇನು ದೊಡ್ಡದಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.ಲಾಲು ಪರ ವಕೀಲ್ ಕಪಿಲ್ ಸಿಬಲ್, ಪ್ರಕರಣ ಸಂಬಂಧ ಯಾವುದನ್ನೂ ವಶಪಡಿಸಿಕೊಂಡಿಲ್ಲ. ಪಿತೂರಿಯಿಂದಾಗಿ ಅವರಿಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ವಾದಿಸಿದರು.

ADVERTISEMENT

ಪ್ರಕರಣದ ಅರ್ಹತೆಯನ್ನು ಹೈಕೋರ್ಟ್‌ ನಿರ್ಧರಿಸಲಿದೆ. ಪ್ರಸ್ತುತ ನಾವು ಜಾಮೀನು ಅರ್ಜಿಯ ವಿಚಾರಣೆ ಮಾತ್ರ ನಡೆಸುತ್ತಿದ್ದೇವೆ ಎಂದು ಕೋರ್ಟ್‌ ತಿಳಿಸಿತು.

ಲಾಲು ಪ್ರಸಾದ್‌ ಅವರಿಗೆ ಜಾಮೀನು ನೀಡುವುದಕ್ಕೆ ಸಿಬಿಐ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿತ್ತು.ಜಾಮೀನು ನೀಡಿದರೆ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದ್ದು,ಜಾಮೀನಿನ ದುರ್ಬಳಕೆ ಆಗಬಹುದು ಎಂದು ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.