ADVERTISEMENT

ಸರೋಜಿನಿ ನಗರ್‌: ಟೆಂಟ್‌ಗಳ ತೆರವು, ಮೇ 2ರವರೆಗೆ ‘ಸುಪ್ರೀಂ’ ತಡೆಯಾಜ್ಞೆ

ಪಿಟಿಐ
Published 25 ಏಪ್ರಿಲ್ 2022, 12:29 IST
Last Updated 25 ಏಪ್ರಿಲ್ 2022, 12:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಸರೋಜಿನಿ ನಗರ್‌ನಲ್ಲಿ ಇರುವ ಸುಮಾರು 200 ವಸತಿ ಟೆಂಟ್‌ಗಳ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಇಲ್ಲಿನ ನಿವಾಸಿ, 10ನೇ ತರಗತಿ ವಿದ್ಯಾರ್ಥಿನಿ ಪರವಾಗಿ ಹಾಜರಿದ್ದ ವಕೀಲ ವಿಕಾಸ್‌ ಸಿಂಗ್‌ ಅವರ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌, ಹೃಷಿಕೇಷ್ ರಾಯ್ ಅವರಿದ್ದ ಪೀಠ ಈ ಆದೇಶ ನೀಡಿತು.

ಪುನರ್ವಸತಿ ಕಾರ್ಯಕ್ರಮವಿಲ್ಲದೆ ಸಾವಿರಾರು ನಿವಾಸಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಮೇ 2ಕ್ಕೆ ವಿಚಾರಣೆ ಮುಂದೂಡಿದ ಪೀಠ, ಅಲ್ಲಿಯವರೆಗೂ ಯಾವುದೇ ಕಠಿಣ ಕ್ರಮಕೈಗೊಳ್ಳಬಾರದು ಎಂದು ಸೂಚಿಸಿತು.

ADVERTISEMENT

ದೆಹಲಿ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯ ಅವಧಿ ಸೋಮವಾರ ಅಂತ್ಯಗೊಂಡಿತ್ತು. ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು, ಸರೋಜಿನಿ ನಗರ್‌ನಲ್ಲಿರುವ 200 ಟೆಂಟ್‌ಗಳ ನಿವಾಸಿಗಳಿಗೆ ವಾರದಲ್ಲಿ ತೆರವುಗೊಳ್ಳಲು ಸೂಚಿಸಿ ಏ. 4ರಂದು ನೋಟಿಸ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.