ADVERTISEMENT

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನ: ಸೊನಮ್‌ ವಾಂಗ್ಚೂಕ್‌ ಅರ್ಜಿ ವಿಚಾರಣೆ ನಾಳೆ

ಪಿಟಿಐ
Published 1 ಫೆಬ್ರುವರಿ 2026, 13:44 IST
Last Updated 1 ಫೆಬ್ರುವರಿ 2026, 13:44 IST
<div class="paragraphs"><p>ಸೊನಮ್‌ ವಾಂಗ್ಚೂಕ್‌ (ಪಿಟಿಐ ಚಿತ್ರ)</p></div>

ಸೊನಮ್‌ ವಾಂಗ್ಚೂಕ್‌ (ಪಿಟಿಐ ಚಿತ್ರ)

   

ನವದೆಹಲಿ: ಪ್ರಸ್ತುತ ಜೋಧಪುರ ಕೇಂದ್ರ ಕಾರಾಗೃಹದಲ್ಲಿರುವ ಪರಿಸರ ಹೋರಾಟಗಾರ ಸೊನಮ್‌ ವಾಂಗ್ಚೂಕ್‌ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ADVERTISEMENT

‘ಅರಬ್ ವಸಂತದಂತೆ (ಅರಬ್ ಕ್ರಾಂತಿ) ಸರ್ಕಾರವನ್ನು ಉರುಳಿಸುವ ಹೇಳಿಕೆಯನ್ನು ನಾನು ನೀಡಿಲ್ಲ’ ಎಂದು ಜನವರಿ 29ರಂದು ಹೇಳಿದ್ದ ವಾಂಗ್ಚೂಕ್‌ ಅವರು, ಪ್ರಜಾಪ್ರಭುತ್ವದಲ್ಲಿ ತನಗೆ ಟೀಕಿಸುವ ಮತ್ತು ಪ್ರತಿಭಟಿಸುವ ಹಕ್ಕು ಇದೆ ಎಂದು ಒತ್ತಿ ಹೇಳಿದ್ದಾರೆ.

ಸೊನಮ್ ಅವರ ಪತ್ನಿಯ ಪ‍ರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಬಂಧನವನ್ನು ಸಮರ್ಥಿಸಲು ‘ಆಯ್ದ ವಿಡಿಯೊವನ್ನು’ ಅವಲಂಬಿಸಿದ್ದಾರೆ ಎಂದು ವಾದಿಸಿದ್ದಾರೆ.

ನವೆಂಬರ್ 24ರಂದು ಕೇಂದ್ರ ಸರ್ಕಾರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆಂಗ್ಮೋ ಸಲ್ಲಿಸಿದ್ದ ಪ್ರತಿವಾದಕ್ಕೆ ಪ್ರತಿಕ್ರಿಯಿಸಲು ಸಮಯಾವಕಾಶ ಕೋರಿದ್ದರು. ಹಾಗಾಗಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮುಂದೂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.