ADVERTISEMENT

ಅಬ್ದುಲ್ಲಾ ಆಜಂ ಖಾನ್‌ ಸ್ಪರ್ಧೆ ಅನೂರ್ಜಿತ: ತೀರ್ಪು ಎತ್ತಿಹಿಡಿದ ‘ಸುಪ್ರೀಂ’

ಪಿಟಿಐ
Published 7 ನವೆಂಬರ್ 2022, 12:44 IST
Last Updated 7 ನವೆಂಬರ್ 2022, 12:44 IST
ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಜೊತೆ ಅಬ್ದುಲ್ಲ ಆಜಂ ಖಾನ್‌ (ಸಾಂದರ್ಭಿಕ ಚಿತ್ರ)
ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಜೊತೆ ಅಬ್ದುಲ್ಲ ಆಜಂ ಖಾನ್‌ (ಸಾಂದರ್ಭಿಕ ಚಿತ್ರ)   

ನವದೆಹಲಿ: 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಅಬ್ದುಲ್ಲಾ ಆಜಂ ಖಾನ್‌ ಅವರ ಚುನಾವಣಾ ಸ್ಪರ್ಧೆಯನ್ನು ಅನೂರ್ಜಿತಗೊಳಿಸಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿಹಿಡಿದಿದೆ.

‘ನಾವು ಈ ಅರ್ಜಿಯನ್ನು ತಳ್ಳಿಹಾಕಿದ್ದೇವೆ’ ಎಂದು ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು ಹೇಳಿದೆ.

ಎಸ್‌ಪಿ ಹಿರಿಯ ನಾಯಕ ಆಜಂ ಖಾನ್‌ ಮಗ ಅಬ್ದುಲ್ಲಾ ಅವರು ನಕಲಿ ಜನನ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗಕ್ಕೆ ಒದಗಿಸಿ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಚುನಾವಣೆ ನಡೆದ ವೇಳೆ ಅವರಿಗೆ 25 ವರ್ಷ ತುಂಬಿರಲಿಲ್ಲ. ಹಾಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಿರಲಿಲ್ಲ ಎಂದು ಹೇಳಿದ್ದ ಹೈಕೋರ್ಟ್‌, 2019ರ ಡಿಸೆಂಬರ್‌ನಲ್ಲಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತೀರ್ಪು ನೀಡಿತ್ತು. ಈ ತೀರ್ಪಿನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.