ಭಾರತ ಮತ್ತು ನೇಪಾಳ
ಕಠ್ಮಂಡು: ಭಾರತ ಮತ್ತು ನೇಪಾಳ ದೇಶಗಳ ಸುಪ್ರೀಂ ಕೋರ್ಟ್‌ಗಳು ಸೋಮವಾರ ಇಲ್ಲಿ ನ್ಯಾಯಾಂಗ ಸಹಕಾರ ಮತ್ತು ಅಭಿವೃದ್ಧಿ ಕುರಿತ ಒಪ್ಪಂದಕ್ಕೆ ಸಹಿ ಹಾಕಿದವು.
ಭಾರತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನೇಪಾಳದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಮನ್ ಸಿಂಗ್ ರಾವುತ್ ಅವರು ಸಹಿ ಹಾಕಿದರು. ಭಾರತದ ಕಾನೂನು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರೂ ಉಪಸ್ಥಿತರಿದ್ದರು.
ಉಭಯ ದೇಶಗಳ ನಡುವೆ ನ್ಯಾಯಾಂಗ ಸಹಕಾರ, ಬಾಂಧವ್ಯ ವೃದ್ಧಿ, ಸಾಮರ್ಥ್ಯ ಅಭಿವೃದ್ಧಿ ಹಾಗೂ ತರಬೇತಿ ಕುರಿತಂತೆ ಈ ಒಪ್ಪಂದವು ಸಾಂಸ್ಥಿಕ ಚೌಕಟ್ಟನ್ನು ಒದಗಿಸಲಿದೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿಯು ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.