ADVERTISEMENT

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನ ಕಲಾಪ ಲೈವ್-ಸ್ಟ್ರೀಮ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 16:10 IST
Last Updated 26 ಆಗಸ್ಟ್ 2022, 16:10 IST
ಸುಪ್ರೀಂ ಕೋರ್ಟ್‌ ಕಲಾಪ
ಸುಪ್ರೀಂ ಕೋರ್ಟ್‌ ಕಲಾಪ    

ನವದೆಹಲಿ: ಸುಪ್ರೀಂಕೋರ್ಟ್‌ನಿಂದ ಇದೇ ಮೊದಲ ಬಾರಿಗೆ ಕಲಾಪದ ನೇರ ಪ್ರಸಾರ ಶುಕ್ರವಾರ ಚಾಲನೆ ಸಿಕ್ಕಿತು.

ವಿಧ್ಯುಕ್ತ ಪೀಠದ ನೇತೃತ್ವ ವಹಿಸಿದ್ದ ಸಿಜೆಐ ಎನ್‌.ವಿ. ರಮಣ ಅವರು, ಎನ್‌ಐಸಿಯ ವೆಬ್ ಕಾಸ್ಟ್ ಪೋರ್ಟಲ್ ಮೂಲಕ ನಿವೃತ್ತಿ ದಿನದ ಕಲಾ‍‍ಪ ನೇರ ಪ್ರಸಾರಕ್ಕೆ ಚಾಲನೆ ನೀಡಿದರು.

ನ್ಯಾಯಾಲಯದಲ್ಲಿ ಸಾಂವಿಧಾನಿಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಕರಣಗಳ ವಿಚಾರಣೆಗಳ ಕಲಾಪದ ನೇರ ಪ್ರಸಾರಕ್ಕೆ 2018ರಲ್ಲಿ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ADVERTISEMENT

ಸಿಜಿಐ ಅವರು ನಡೆಸುವ ಪ್ರಮುಖ ಪ್ರಕರಣಗಳ ವಿಚಾರಣೆಯ ಕಲಾಪದ ನೇರ ಪ್ರಸಾರವನ್ನು ಪೈಲಟ್‌ ಯೋಜನೆ ಆಧಾರದ ಮೇಲೆ ಪ್ರಾರಂಭಿಸಬಹುದು. ಇದರ ಯಶಸ್ಸು ನೋಡಿಕೊಂಡು ಈ ಪ್ರಕ್ರಿಯೆಯನ್ನು ಇತರ ನ್ಯಾಯಾಲಯ ಕೊಠಡಿಗಳಲ್ಲೂ ಅಳವಡಿಸಬಹುದು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಈ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.