ADVERTISEMENT

ಸುಶೀಲ್ ಚಂದ್ರ ನೂತನ ಚುನಾವಣಾ ಆಯುಕ್ತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 18:14 IST
Last Updated 14 ಫೆಬ್ರುವರಿ 2019, 18:14 IST
ಸುಶೀಲ್ ಚಂದ್ರ
ಸುಶೀಲ್ ಚಂದ್ರ   

ನವದೆಹಲಿ: ಕೇಂದ್ರ ನೇರ ತೆರಿಗೆ ಮಂಡಳಿ ಮುಖ್ಯಸ್ಥ ಸುಶೀಲ್ ಚಂದ್ರ ಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿ ಗುರುವಾರ ನೇಮಿಸಲಾಗಿದೆ.

1980ನೇ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿಯಾಗಿರುವ ಚಂದ್ರ ಅವರು, ಚುನಾವಣಾ ಆಯೋಗದ ಎರಡನೇ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸುನಿಲ್ ಅರೋರಾ ಅವರು ಮುಖ್ಯಚುನಾವಣಾ ಆಯುಕ್ತರಾಗಿ ಹಾಗೂ ಅಶೋಕ್ ಲವಾಸಾ ಅವರು ಚುನಾವಣಾ ಆಯುಕ್ತರಾಗಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.

ಚುನಾವಣಾ ಆಯೋಗವು ಕೆಲವೇ ವಾರಗಳಲ್ಲಿಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಗೊಳಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.