ADVERTISEMENT

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ನಿಧನ

ಪಿಟಿಐ
Published 4 ಡಿಸೆಂಬರ್ 2025, 13:05 IST
Last Updated 4 ಡಿಸೆಂಬರ್ 2025, 13:05 IST
<div class="paragraphs"><p>ಪತ್ನಿ ಸುಷ್ಮಾ ಜೊತೆ  ಸ್ವರಾಜ್ ಕೌಶಲ್ </p></div>

ಪತ್ನಿ ಸುಷ್ಮಾ ಜೊತೆ ಸ್ವರಾಜ್ ಕೌಶಲ್

   

ಎಕ್ಸ್ ಚಿತ್ರ

ನವದೆಹಲಿ: ಬಿಜೆಪಿ ನಾಯಕಿಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಅವರು ಗುರುವಾರ ಮೃತಪಟ್ಟಿದ್ದಾರೆ. ಅವರಿಗೆ 73 ವರ್ಷವಾಗಿತ್ತು.

ADVERTISEMENT

ಲೋಧಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಅವರ ಅಂತಿಮ ಕ್ರಿಯೆಗಳು ನಡೆದವು.

‘ಸಂಸದೆ ಹಾಗೂ ಸಚಿವೆ ಶ್ರುಶಿ ಬಾನ್ಸುರಿ ಸ್ವರಾಜ್ ಅವರ ತಂದೆ, ಸ್ವರಾಜ್ ಕೌಶಲ್ ಅವರು ಇಂದು ನಿಧನರಾಗಿದ್ದಾರೆ’ ಎಂದು ಬಿಜೆಪಿಯ ದೆಹಲಿ ಘಟಕ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಎದೆನೋವು ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ಕರೆತರುವ ದಾರಿ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಯಾರು ಈ ಸ್ವರಾಜ್ ಕೌಶಲ್

1952ರ ಜುಲೈ 12ರಂದು ಹಿಮಾಚಲ ಪ್ರದೇಶದ ಸೋಲನ್ ಜನಿಸಿದ್ದ ಸ್ವರಾಜ್ ಅವರು ತಮ್ಮ 37ನೇ ವಯಸ್ಸಿನಲ್ಲಿ ಮಿಜೋರಾಂನ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. 34ನೇ ವಯಸ್ಸಿನಲ್ಲಿದ್ದಾಗ ಅವರನ್ನು ಹಿರಿಯ ವಕೀಲರಾಗಿ ಸುಪ್ರೀಂ ಕೋರ್ಟ್ ಗೊತ್ತುಪಡಿಸಿತ್ತು.

1998ರಿಂದ 2004ರವರೆಗೆ ಹರಿಯಾಣ ವಿಕಾಸ್ ಪಕ್ಷದಿಂದ ರಾಜ್ಯಸಭಾ ಸಂಸದರಾಗಿದ್ದರು. 1975ರಲ್ಲಿ ಸುಷ್ಮಾ ಸ್ವರಾಜ್ ಹಾಗೂ ಕೌಶಲ್ ಸ್ವರಾಜ್ ಅವರ ಮದುವೆ ನಡೆದಿತ್ತು.

ಪುತ್ರಿ ಬಾನ್ಸುರಿ ಸ್ವರಾಜ್ ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.