ADVERTISEMENT

ಅಮಾನತು: ವಿವರಣೆ ಕೇಳಿ ಸಿ.ಎಸ್‌.ಗೆ ಪತ್ರ ಬರೆದ ಐಎಎಸ್ ಅಧಿಕಾರಿ ಪ್ರಶಾಂತ್

ಪಿಟಿಐ
Published 27 ಡಿಸೆಂಬರ್ 2024, 16:28 IST
Last Updated 27 ಡಿಸೆಂಬರ್ 2024, 16:28 IST
<div class="paragraphs"><p>ಅಮಾನತು</p></div>

ಅಮಾನತು

   

ತಿರುವನಂತಪುರ: ‘ಕಲೆಕ್ಟರ್‌ ಬ್ರೋ’ ಎಂದೇ ಹೆಸರಾಗಿರುವ ಕೇರಳದ ಐಎಎಸ್ ಅಧಿಕಾರಿ ಎನ್‌. ಪ್ರಶಾಂತ್ ಅವರನ್ನು ಹಿರಿಯ ಅಧಿಕಾರಿಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ವ್ಯಕ್ತಪಡಿಸಿದ ಕಾರಣಕ್ಕೆ ಅಮಾನತು ಮಾಡಲಾಗಿದ್ದು, ತಮ್ಮ ವಿರುದ್ಧದ ಆರೋಪಕ್ಕೆ ಅವರು ಮುಖ್ಯ ಕಾರ್ಯದರ್ಶಿಯಿಂದ ವಿವರಣೆ ಕೇಳಿದ್ದಾರೆ. 

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ. ಜಯತಿಲಕ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ ಕಾರಣ ನೀಡಿ, ಪ್ರಶಾಂತ್ ಅವರನ್ನು ಅಮಾನತು ಮಾಡಲಾಗಿತ್ತು. ತಮ್ಮ ವಿರುದ್ಧ ದೂರು ನೀಡಿದವರು ಯಾರು, ಡಿಜಿಟಲ್ ಸಾಕ್ಷ್ಯಗಳನ್ನು ಸಾಚಾ ಎಂದು ತೀರ್ಮಾನ ಮಾಡಿದ್ದು ಹೇಗೆ ಎಂದು ಪ್ರಶ್ನಿಸಿ ಅವರು ಡಿ. 16ರಂದು ಮುಖ್ಯ ಕಾರ್ಯರ್ಶಿಗೆ ಪತ್ರ ಬರೆದಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.