ADVERTISEMENT

ನೌಕಾನೆಲೆಗೆ ಅನುಮಾನಾಸ್ಪದ ಕರೆ: ಒಬ್ಬನ ಬಂಧನ

ಪಿಟಿಐ
Published 12 ಮೇ 2025, 16:27 IST
Last Updated 12 ಮೇ 2025, 16:27 IST
...
...   

ಕೊಚ್ಚಿ: ನೌಕಾಪಡೆಯ ಮುಖ್ಯ ಸ್ವತ್ತುಗಳ ಬಗ್ಗೆ ವಿಚಾರಿಸಲು ಅನುಮಾನಾಸ್ಪದ ಕರೆಯೊಂದು ಬಂದ ಕಾರಣ ಕೊಚ್ಚಿಯ ನೌಕಾನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಘಟನೆ ಸಂಬಂಧ ಕೋಯಿಕ್ಕೋಡ್‌ನಲ್ಲಿ 31 ವಯಸ್ಸಿನ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 9ರಂದು ನೌಕಾನೆಲೆಗೆ ಕರೆಬಂದಿದ್ದು, ತಕ್ಷಣ ಕೆಂಪುಧ್ವಜವನ್ನು ಹಾರಿಸಲಾಗಿತ್ತು.

ನೌಕಾಪಡೆಯ ಆಂತರಿಕ ರಕ್ಷಣಾ ವಿಭಾಗವು ಇದನ್ನು ಗಂಭಿರವಾಗಿ ಪರಿಗಣಿಸಿದ್ದು, ಗುಪ್ತಚರ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ ಎಂದು ಸೇನೆಯ ಪ್ರಕಟಣೆ ಸೋಮವಾರ ತಿಳಿಸಿದೆ. ಘಟನೆ ಸಂಬಂಧ ಹಾರ್ಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.