ನವದೆಹಲಿ: ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿಯೊಬ್ಬಳ ಗುರುತು ಬಹಿರಂಗ ಪಡಿಸಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಾಲೀವಾಲ್ ಅವರನ್ನು ದೆಹಲಿ ನ್ಯಾಯಾಲಯವೊಂದು ಬುಧವಾರ ಖುಲಾಸೆಗೊಳಿಸಿದೆ.
ಹೆಚ್ಚುವರಿ ಮುಖ್ಯ ನ್ಯಾಯಾಧೀಶೆ ನೇಹಾ ಮಿತ್ತಲ್ ಅವರು ಆದೇಶ ನೀಡಿದರು. ಆದೇಶದ ಪ್ರತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಸ್ವಾತಿ ಅವರು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಆಗಿದ್ದಾಗಿನ 2016ರ ಪ್ರಕರಣ ಇದಾಗಿದೆ. ಬಾಲನ್ಯಾಯ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಸ್ವಾತಿ ಅವರ ಮೇಲಿತ್ತು.
ಉಪ ಆಯುಕ್ತರಿಗೆ ಪತ್ರ ಬರೆದಿದ್ದ ಸ್ವಾತಿ ಅವರು ಪ್ರಕರಣದ ತನಿಖೆ ಕುರಿತು ಮಾಹಿತಿ ನೀಡುವಂತೆ ನೋಟಿಸ್ ನೀಡಿದ್ದರು. ಈ ನೋಟಿಸ್‌ನಲ್ಲಿ ಬಾಲಕಿಯ ಹೆಸರಿತ್ತು. ಇದೇ ನೋಟಿಸ್ ಪ್ರತಿಯನ್ನು ಸ್ವಾತಿ ಅವರು ಎಲ್ಲ ಮಾಧ್ಯಮಗಳಿಗೂ ಕಳುಹಿಸಿಕೊಟ್ಟಿದ್ದರು. ‘ಹಲವು ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಈ ನೋಟಿಸ್ ಹರಿದಾಡಿತ್ತು ಮತ್ತು ಸುದ್ದಿ ವಾಹಿನಿಗಳೂ ಈ ನೋಟಿಸ್ ಅನ್ನು ಬಿತ್ತರಿಸಿದ್ದವು’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.