ADVERTISEMENT

ಸಿಂಥೈಟ್ ಗ್ರೂಪ್ ಸಂಸ್ಥಾಪಕ ಸಿ.ವಿ. ಜಾಕೋಬ್ ನಿಧನ

Synthite Group founder-chairman dead

ಪಿಟಿಐ
Published 31 ಜನವರಿ 2021, 18:05 IST
Last Updated 31 ಜನವರಿ 2021, 18:05 IST

ಕೊಚ್ಚಿ: ಸಿಂಥೈಟ್ ಸಮೂಹದ ಸಂಸ್ಥಾಪಕ ಅಧ್ಯಕ್ಷ ಸಿ.ವಿ. ಜಾಕೋಬ್ (88) ಕೇರಳದ ಕೋಲೆಂಚೆರಿಯ ತಮ್ಮ ಮನೆಯಲ್ಲಿ ಭಾನುವಾರ ನಿಧನರಾಗಿದ್ದಾರೆ ಎಂದು ಕುಟುಂಬವು ತಿಳಿಸಿದೆ.

ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಜಾಕೋಬ್ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

1972ರಲ್ಲಿ ಸ್ಥಾಪನೆಯಾದ ಸಿಂಥೈಟ್ ಸಮೂಹವು ರಿಯಲ್ ಎಸ್ಟೇಟ್, ಪವನ ವಿದ್ಯುತ್ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿನ ಉದ್ಯಮಗಳಲ್ಲಿ ದೊಡ್ಡ ಹೆಸರು ಮಾಡಿದೆ. ಅಲ್ಲದೇ, ಮೌಲ್ಯವರ್ಧಿತ ಮಸಾಲೆ ಉತ್ಪನ್ನಗಳು ಮತ್ತು ನೈಸರ್ಗಿಕ ಮಸಾಲೆ ಪುಡಿಯನ್ನು ಉತ್ಪಾದಿಸುವ ವಿಶ್ವದ ದೊಡ್ಡ ಸಂಸ್ಥೆಯಾಗಿದೆ. ಸಂಸ್ಥೆಯು ವಾರ್ಷಿಕವಾಗಿ ₹ 1,600 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.