ನವದೆಹಲಿ: 26/11ರ ಮುಂಬೈನಲ್ಲಿ ನಡೆದ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಮತ್ತೆ 12 ದಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಕಸ್ಟಡಿಗೆ ನೀಡಿ ದೆಹಲಿ ಕೋರ್ಟ್ ಸೋಮವಾರ ಆದೇಶಿಸಿದೆ.
ಈ ಮೊದಲಿನ 18 ದಿನಗಳ ಕಸ್ಟಡಿ ಮುಗಿದ ನಂತರ ಎನ್ಐಎ ಕೋರಿಕೆಯ ಮೇರೆಗೆ ವಿಶೇಷ ಎನ್ಐಎ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರು ರಾಣಾನ ಕಸ್ಟಡಿ ಅವಧಿಯನ್ನು ವಿಸ್ತರಿಸಿದರು.
ಬಿಗಿ ಭದ್ರತೆಯ ನಡುವೆ, ಮುಖ ಮರೆಸಿ ರಾಣಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ರಾಣಾನ ಬಂಧನದ ನಂತರ ಕಳೆದ 18 ದಿನಗಳಲ್ಲಿ ಆಗಿರುವ ತನಿಖೆಯ ಬಗ್ಗೆ ತನಿಖಾ ಸಂಸ್ಥೆಯು ನ್ಯಾಯಾಧೀಶರಿಗೆ ಅವರ ಕೊಠಡಿಯಲ್ಲಿ ವಿವರ ನೀಡಿತು.
ನ್ಯಾಯಾಧೀಶರು ರಾಣಾಗೆ ‘ಸಾಫ್ಟ್-ಟಿಪ್ ಪೆನ್’ ಬಳಸಲು, ಎನ್ಐಎ ಅಧಿಕಾರಿಗಳ ಸಮ್ಮುಖದಲ್ಲಿ ತನ್ನ ವಕೀಲರ ಭೇಟಿಯಾಗಲು ಅವಕಾಶ ಕಲ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.