ADVERTISEMENT

ಕಾಬೂಲ್‌ನಿಂದ ಇಂದು ಭಾರತಕ್ಕೆ ಆಗಮಿಸಲಿರುವ 180 ಮಂದಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 3:56 IST
Last Updated 26 ಆಗಸ್ಟ್ 2021, 3:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:‌ಅಫ್ಗಾನಿಸ್ತಾನದಿಂದ ತನ್ನ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಆಗಸ್ಟ್‌31ರ ಗಡುವನ್ನು ಪಾಲಿಸಲಾಗುವುದು ಎಂದು ಅಮೆರಿಕ ಹೇಿಳಿಕೆ ನೀಡಿದೆ. ವಿವಿಧ ದೇಶಗಳು ತಮ್ಮ ನಾಗರಿಕರನ್ನು‌ಅಫ್ಗಾನಿಸ್ತಾನದಿಂದ ವಾಪಸ್‌ ಕರೆಸಿಕೊಳ್ಳಲು ಹರಸಹಾಸ ಪಡುತ್ತಿದ್ದು,‌ ಇದೇವೇಳೆ ಕಾಬೂಲ್‌ನಿಂದ180 ಜನರು ಸೇನಾ ವಿಮಾನದ ಮೂಲಕಗುರುವಾರ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ.

180 ಜನರನ್ನು ಹೊತ್ತವಿಮಾನವು ಇಂದು ಬೆಳಿಗ್ಗೆ ದೆಹಲಿ ತಲುಪಲಿದ್ದು, ಇದರಲ್ಲಿ ಭಾರತೀಯರು ಮಾತ್ರವಲ್ಲದೆ ಅಫ್ಗಾನಿಸ್ತಾನದ‌ ಹಿಂದೂ ಮತ್ತು ಸಿಖ್ ಸಮುದಾಯದವರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಲಿಬಾನ್ ಆಗಸ್ಟ್‌ 15 ರಂದು ಹಿಡಿತ ಸಾಧಿಸಿದ ಬಳಿಕ ಅಫ್ಗಾನಿಸ್ತಾನದಲ್ಲಿ‌ ಕ್ಷೀಣಿಸುತ್ತಿರುವ ಭದ್ರತಾ ಸ್ಥಿತಿಯನ್ನು ಗಮನದಲ್ಲಿರಿಸಿ ಭಾರತವುʼಆಪರೇಷನ್‌ ದೇವಿ ಶಕ್ತಿʼ ಮಿಷನ್‌ಅಡಿಯಲ್ಲಿ ಈಗಾಗಲೇ800 ಜನರನ್ನು ಭಾರತಕ್ಕೆ ಕರೆತಂದಿದೆ.

ADVERTISEMENT

ತಾಲಿಬಾನ್‌ ಕ್ರೌರ್ಯಕ್ಕೆ ಹೆದರಿ ದೇಶದಿಂದ ಪಲಾಯನ ಮಾಡಲು ಜನರು ಕಾಬೂಲ್‌ ವಿಮಾನ ನಿಲ್ದಾಣದತ್ತ ಭಾರಿ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಚಿತ್ರಗಳು ವೈರಲ್‌ ಆಗಿವೆ.

ಅಫ್ಗಾನಿಸ್ತಾನದ ಬೆಳವಣಿಗೆಗಳ ಕುರಿತು ಚರ್ಚಿಸಲು G-7 ರಾಷ್ಟ್ರಗಳ ನಾಯಕರುಬುಧವಾರ ಸಭೆ ನಡೆಸಿದ್ದರು. ಈ ವೇಳೆಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಗಡುವನ್ನು ವಿಸ್ತರಿಸುವಂತೆಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಮನವಿ ಮಾಡಲಾಗಿತ್ತು. ಆದರೆ,ನಿಗದಿತ ಗಡುವಿಗೆ ಬದ್ಧವಾಗಿರುವುದಾಗಿ ಬೈಡನ್‌ ಹೇಳಿದ್ದಾರೆ.

‘ಎಷ್ಟು ಬೇಗ ಪೂರ್ಣಗೊಳಿಸುತ್ತೇವೆಯೋ ಅಷ್ಟು ಒಳ್ಳೆಯದು. ಒಂದೊಂದು ದಿನ ಕಳೆದಂತೆಯೂ ನಮ್ಮ ಪಡೆಗಳಿಗೆ ಅಪಾಯ ಹೆಚ್ಚುತ್ತಲೇ ಹೋಗುತ್ತದೆ. ಈಗಿನ ವೇಗದಲ್ಲಿ ಹೋದರೆ 31ರ ಒಳಗೆ ತೆರವು ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಬೈಡನ್‌ ತಿಳಿಸಿದ್ದಾರೆ.

ಇವನ್ನೂ ಓದಿ
*

*
*
*
*
*
​*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.