ಶಬರಿಮಲೆ
– ಪಿಟಿಐ ಚಿತ್ರ
ತಿರುವನಂತಪುರ: ಶಬರಿಮಲೆ ಹೆಸರಿನಲ್ಲಿ ಭಕ್ತರಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವುದನ್ನು ತಡೆಯುವುದಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಬಿಡಿ) ಅಧಿಕೃತವಾಗಿ ಪ್ರಾಯೋಜಕತ್ವ ಸಮನ್ವಯಕಾರರನ್ನು ನೇಮಕಗೊಳಿಸಿದೆ.
ಈ ಕುರಿತು ಗುರುವಾರ ಪ್ರಕಟಣೆ ಹೊರಡಿಸಿರುವ ಟಿಬಿಡಿ, ‘ವಿವಿಧ ರಾಜ್ಯಗಳಲ್ಲಿ ಕೆಲವು ಮಂದಿ ದೇಗುಲದ ಆಡಳಿತ ಮಂಡಳಿಯ ಸದಸ್ಯರ ಸೋಗಿನಲ್ಲಿ ಹಣ ಸಂಗ್ರಹಿಸುತ್ತಿರುವುದು ಕಂಡುಬಂದಿತ್ತು. ಈ ಕಾರಣದಿಂದ ದೇಗುಲದ ಸಾರ್ವಜನಿಕ ವ್ಯವಹಾರ ಅಧಿಕಾರಿ ಜಿ.ಎಸ್ ಅರುಣ್ ಅವರನ್ನು ಪ್ರಾಯೋಜಕತ್ವ ಸಮನ್ವಯಕಾರರನ್ನಾಗಿ, ಛಾಯಾಗ್ರಾಹಕರಾದ ಪಿ.ವಿಜಯ್ ಕುಮಾರ್ ಅವರನ್ನು ಸಹಾಯಕ ಪ್ರಾಯೋಜಕತ್ವ ಸಮನ್ವಯಕಾರರನ್ನಾಗಿ ನೇಮಿಸಲಾಗಿದೆ’ ಎಂದು ಹೇಳಿದೆ.
‘ದೇವಾಲಯಕ್ಕೆ ಹಣ ಸಹಾಯ ಮಾಡಬಯಸುವವರು ಈ ಅಧಿಕಾರಿಗಳ ಮುಖಾಂತರ ಅಥವಾ ಶಬರಿಮಲೆ ದೇಗುಲದಲ್ಲಿರುವ ಕಾರ್ಯನಿರ್ವಾಹಕರ ಕಚೇರಿಗೆ ಬಂದು ದೇಣಿಗೆ ನೀಡಬಹುದು. ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕವೂ ದೇಣಿಗೆ ನೀಡಬಹುದು. ಇದರ ಹೊರತಾಗಿ ಬೇರೆ ಯಾರೇ ಹಣ ಸಂಗ್ರಹಿಸಿದರೂ ಅದಕ್ಕೆ ಮಂಡಳಿ ಜವಾಬ್ದಾರಿಯಲ್ಲ’ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.