ADVERTISEMENT

ದೆಹಲಿ: ವಿದ್ಯಾರ್ಥಿನಿಯನ್ನು ಕಟ್ಟಡದಿಂದ ಕೆಳಗೆಸೆದ ಶಿಕ್ಷಕಿ

ಪಿಟಿಐ
Published 16 ಡಿಸೆಂಬರ್ 2022, 11:09 IST
Last Updated 16 ಡಿಸೆಂಬರ್ 2022, 11:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಮಾಡೆಲ್‌ ಬಸ್ತಿ ಪ್ರದೇಶದ ಮಹಾನಗರ ಪಾಲಿಕೆಗೆ ಒಳಪಟ್ಟ ಪ್ರಾಥಮಿಕ ಶಾಲೆಯೊಂದರಲ್ಲಿ ಐದನೇ ತರಗತಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಹೊಡೆದು, ಶಾಲೆಯ ಮೊದಲ ಮಹಡಿಯಿಂದ ಕೆಳಗೆಸೆದ ಘಟನೆ ಶುಕ್ರವಾರ ನಡೆದಿದೆ.

ಆರೋಪಿ ಶಿಕ್ಷಕಿಯನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಶಿಕ್ಷಕಿ ಗೀತಾ ದೇಶ್ವಾಲ್‌ ಎಂಬುವವರು ಸಣ್ಣ ಕತ್ತರಿಯಿಂದ ಬಾಲಕಿಗೆ ಹೊಡೆದು, ಕಟ್ಟಡದಿಂದ ಕೆಳಗೆಸೆದಿದ್ದಾರೆ. ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ’ ಎಂದು ಹೇಳಿದ್ದಾರೆ.

ADVERTISEMENT

ಘಟನೆಯ ಮಾಹಿತಿ ಅರಿತು ಭಾರಿ ಸಂಖ್ಯೆಯಲ್ಲಿ ಜನರು ಶಾಲೆಯ ಬಳಿ ನೆರೆದಿದ್ದರು. ಬಳಿಕ ಪೊಲೀಸರು ಬಂದು ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಶಿಕ್ಷಕಿಯ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ವಿವರಿಸಿದ್ದಾರೆ.

‘ಶಿಕ್ಷಕಿಯನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ’ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.