
ಪಿಟಿಐ
ಹೈದರಾಬಾದ್: ನಿಷೇಧಿತ ಸಂಘಟನೆ ಸಿಪಿಐನ (ಮಾವೋವಾದಿ) ಛತ್ತೀಸಗಢ ಘಟಕದ ಮಹಿಳೆಯೊಬ್ಬರು ತೆಲಂಗಾಣದ ಪೊಲೀಸರಿಗೆ ಸೋಮವಾರ ಶರಣಾಗಿದ್ದಾರೆ.
ಮುಲುಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಬರೀಶ್ ಪಿ. ಅವರ ಮುಂದೆ 30 ವರ್ಷದ ಮಹಿಳೆ ಶರಣಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.
ತೆಲಂಗಾಣ ಸರ್ಕಾರವು ಶರಣಾದ ಮಾವೋವಾದಿಗಳಿಗಾಗಿ ಪರಿಚಯಿಸಿದ ಪುನರ್ವಸತಿ ಯೋಜನೆ ಮತ್ತು ಬುಡಕಟ್ಟು ಸಮುದಾಯಗಳಿಗೆ ಅನುಷ್ಠಾನಗೊಳಿಸಿದ ಕಲ್ಯಾಣ ಯೋಜನೆಗಳನ್ನು ತಿಳಿದು, ಶಸ್ತ್ರಾಸ್ತ್ರ ತ್ಯಜಿಸಲು ಅವರು ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.