ADVERTISEMENT

ತೆಲಂಗಾಣದ 'ಬತುಕಮ್ಮ' ಆಚರಣೆ: ಈ ವರ್ಷ ಎರಡು ಗಿನ್ನಿಸ್ ವಿಶ್ವ ದಾಖಲೆ

ಪಿಟಿಐ
Published 29 ಸೆಪ್ಟೆಂಬರ್ 2025, 16:24 IST
Last Updated 29 ಸೆಪ್ಟೆಂಬರ್ 2025, 16:24 IST
<div class="paragraphs"><p> 'ಬತುಕಮ್ಮ' ಆಚರಣೆ</p></div>

'ಬತುಕಮ್ಮ' ಆಚರಣೆ

   

ಹೈದರಾಬಾದ್ ಮೇಯರ್ ವಿಜಯಲಕ್ಷ್ಮಿ ಗದ್ವಾಲ್

ಹೈದರಾಬಾದ್: ಸೋಮವಾರ ರಾಜ್ಯ ಸರ್ಕಾರ ಆಯೋಜಿಸಿದ್ದ ತೆಲಂಗಾಣದ ಹೂವಿನ ಹಬ್ಬ 'ಬತುಕಮ್ಮ' ಆಚರಣೆಯು ಎರಡು ಗಿನ್ನಿಸ್ ದಾಖಲೆ ಬರೆದಿದೆ. 'ಅತ್ಯಂತ ಎತ್ತರದ ಬತುಕಮ್ಮ' ಮತ್ತು 'ಅತಿದೊಡ್ಡ ತೆಲಂಗಾಣ ಜಾನಪದ ನೃತ್ಯ'ಕ್ಕಾಗಿ ಎರಡು ಹೊಸ ದಾಖಲೆ ಆಗಿದೆ.

ADVERTISEMENT

ಸರೂರ್ ನಗರ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 2025ರ ವಿಶ್ವ ಸುಂದರಿ ಒಪಾಲ್ ಸುಚಾತಾ ಚೌಂಗಶ್ರೀ ಮತ್ತು ಇತರರು ಭಾಗವಹಿಸಿದ್ದರು.

ಗಿನ್ನಿಸ್ ವಿಶ್ವ ದಾಖಲೆ ಪ್ರತಿನಿಧಿ ಮಾತನಾಡಿ, ‘ಗಿನ್ನೆಸ್ ದಾಖಲೆಗೆ ನಾವು ಕನಿಷ್ಠ 11 ಮೀಟರ್ ಎತ್ತರದ ರಚನೆಯ ಅವಶ್ಯಕತೆ ಇದೆ ಎಂದು ತಿಳಿಸಿದ್ದೆವು. ಆದರೆ, ಇಲ್ಲಿ ನೋಡುತ್ತಿರುವುದು 19 ಮೀಟರ್‌ಗಳಿಗಿಂತ ಹೆಚ್ಚು ಎತ್ತರದ ವಿಶ್ವದ ಅತಿ ಎತ್ತರದ ಬತುಕಮ್ಮ ರಚನೆ. ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ಇದು ಹೊಸ ವಿಶ್ವ ದಾಖಲೆಯಾಗಿದೆ’ ಎಂದು ಹೇಳಿದರು.

ಎರಡನೇ ದಾಖಲೆ ಎಂದರೆ ತೆಲಂಗಾಣದ ಅತಿದೊಡ್ಡ ಜಾನಪದ ನೃತ್ಯ. 474ಕ್ಕೂ ಅಧಿಕ ಮಂದಿ ಈ ನೃತ್ಯದಲ್ಲಿ ಪಾಲ್ಗೊಂಡು ಹೊಸ ದಾಖಲೆ ಬರೆದರು.

ತೆಲಂಗಾಣ ಪ್ರವಾಸೋದ್ಯಮ ಸಚಿವೆ ಜೂಪಲ್ಲಿ ಕೃಷ್ಣ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಿ. ಅನಸೂಯ ಸೀತಕ್ಕ, ಹೈದರಾಬಾದ್ ಮೇಯರ್ ವಿಜಯಲಕ್ಷ್ಮಿ ಗದ್ವಾಲ್ ಮತ್ತು ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ತೆಲಂಗಾಣದ ಬತುಕಮ್ಮ ಆಚರಣೆ ಇತಿಹಾಸ ನಿರ್ಮಿಸಿದೆ! ಸರೂರ್ ನಗರ ಕ್ರೀಡಾಂಗಣದ ಏಳು ಟನ್‌ಗಳಷ್ಟು ಹೂವುಗಳಿಂದ ಅಲಂಕರಿಸಲ್ಪಟ್ಟ 63.11 ಅಡಿ ಎತ್ತರ, 11 ಅಡಿ ಅಗಲದ ಬೃಹತ್ ಬತುಕಮ್ಮ ಮತ್ತು ಅತಿದೊಡ್ಡ ಜಾನಪದ ನೃತ್ಯಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯಾಗಿದೆ’ ಎಂದು ಮೇಯರ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ತೆಲಂಗಾಣದ ಸಂಸ್ಕೃತಿ ಜಾಗತಿಕವಾಗಿ ಪ್ರಜ್ವಲಿಸುತ್ತಿದೆ ಎಂದು ಹೇಳುವ ಮೂಲಕ ಭಾವಪೂರ್ಣ 'ಬತುಕಮ್ಮ' ಹಾಡಿಗೆ ನೃತ್ಯ ಮಾಡಿದ 1,354 ಮಹಿಳೆಯರನ್ನು ಅವರು ಅಭಿನಂದಿಸಿದರು.

ದುರ್ಗಾ ಪೂಜೆ ಮತ್ತು ದಸರಾದೊಂದಿಗೆ ತೆಲಂಗಾಣದಲ್ಲಿ ಒಂಬತ್ತು ದಿನಗಳ ಕಾಲ ಬತುಕಮ್ಮ ಉತ್ಸವವು ನಡೆಯುತ್ತದೆ. ತಾಯಿ ಗೌರಿಯನ್ನು ಇಲ್ಲಿನ ಜನ ಪೂಜಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.