ADVERTISEMENT

ಉಗ್ರರ ಅಡಗುತಾಣ ಸ್ಫೋಟಿಸಿದ ಭದ್ರತಾ ಪಡೆಗಳು

ಪಿಟಿಐ
Published 14 ಜೂನ್ 2025, 16:21 IST
Last Updated 14 ಜೂನ್ 2025, 16:21 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಪ್ರದೇಶವೊಂದರಲ್ಲಿದ್ದ ಭಯೋತ್ಪಾದಕರ ಅಡಗುತಾಣವೊಂದನ್ನು ಭದ್ರತಾ ಪಡೆಗಳು ಶನಿವಾರ ಸ್ಫೋಟಿಸಿವೆ. ರಾಷ್ಟ್ರೀಯ ರೈಫಲ್ಸ್‌ ಮತ್ತು ವಿಶೇಷ ಕಾರ್ಯಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. 

‘ಅಡಗುತಾಣದಿಂದ 400 ಗ್ರಾಂನಷ್ಟು ಸ್ಫೋಟಕ ವಸ್ತುಗಳು, ಮಷಿನ್‌ ಗನ್‌ನಲ್ಲಿ ಬಳಸುವ 48 ಸುತ್ತಿನ ಗುಂಡು, ಪಿಸ್ತೂಲ್‌ನಲ್ಲಿ ಬಳಸುವ ಐದು ಸುತ್ತು ಗುಂಡು, ಒಂದು ಎಕೆ–47, ಒಂದು ಅಶ್ರುವಾಯುವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಯಾರನ್ನೂ ಬಂಧಿಸಲಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.