ಇತ್ತೀಚೆಗೆ ಹಿಂಸಾಚಾರ ನಡೆದ ಮುರ್ಷಿದಾಬಾದ್‌ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು
––ಪಿಟಿಐ ಚಿತ್ರ
ಮುರ್ಶಿದಾಬಾದ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೋಮು ದ್ವೇಷಕ್ಕೆ ಪ್ರಚೋದನೆ ನೀಡುತ್ತಿದೆ ಮತ್ತು ದೇಶದ ಗಡಿಯನ್ನು ರಕ್ಷಣೆ ಮಾಡಲು ವಿಫಲವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಆರೋಪಿಸಿದ್ದಾರೆ.
ಇತ್ತೀಚೆಗೆ ಮುರ್ಶಿದಾಬಾದ್‌ನಲ್ಲಿ ನಡೆದ ಹಿಂಸಾಚಾರದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳು ತಮ್ಮನ್ನು ಭೇಟಿಯಾಗದಂತೆ ಕೇಸರಿ ಪಾಳಯ ತಡೆದಿದೆ ಎಂದು ದೂರಿದರು.
ಕಳೆದ ತಿಂಗಳು ಹಿಂಸಾಚಾರ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮುರ್ಶಿದಾಬಾದ್‌ಗೆ ಭೇಟಿ ನೀಡಿದ ಅವರು, ‘ಹೊರಗಿನ ಕೆಲವರು ಮತ್ತು ಕೆಲವು ಧಾರ್ಮಿಕ ಮುಖಂಡರು ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆ. ಅಲ್ಲದೆ, ಸಮುದಾಯಗಳ ಮಧ್ಯೆ ದ್ವೇಷ ಸೃಷ್ಟಿಸುತ್ತಿದ್ದಾರೆ. ಗಲಭೆಗೆ ಪ್ರಚೋದನೆ ನೀಡುವವರು ಪಶ್ಚಿಮ ಬಂಗಾಳದ ವೈರಿಗಳು’ ಎಂದು ಪ್ರತಿಪಾದಿಸಿದರು.
‘ಆರೋಪ ರಾಜಕೀಯ ಪ್ರೇರಿತ’: ಇಲ್ಲಿನ ಡಿಘಾ ಪಟ್ಟಣದಲ್ಲಿ ನಿರ್ಮಿಸಲಾದ ದೇವಸ್ಥಾನದ ಪ್ರತಿಮೆಗಳನ್ನು ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದಿಂದ ಕಳ್ಳತನ ಮಾಡಿದ ಬೇವಿನ ಮರದಿಂದ ಕೆತ್ತಲಾಗಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲಗಳೆದಿದ್ದಾರೆ.
ಪೂರಿ ಜಗನ್ನಾಥ ದೇವಸ್ಥಾನದಲ್ಲಿ ಕಳ್ಳತನವಾಗಿದ್ದ ಬೇವಿನ ಮರವನ್ನು ನಮ್ಮ ರಾಜ್ಯದಲ್ಲಿ ದೇವಸ್ಥಾನದ ಮೂರ್ತಿ ಕೆತ್ತನೆಗೆ ಬಳಸಿಕೊಳ್ಳುವ ಅನಿವಾರ್ಯ ಸರ್ಕಾರಕ್ಕೆ ಇಲ್ಲ. ಈ ಆರೋಪ ರಾಜಕೀಯ ಪ್ರೇರಿತ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.