ADVERTISEMENT

ಲಸಿಕೆ ಪಡೆದವರು ‘ಬಾಹುಬಲಿ’: ನರೇಂದ್ರ ಮೋದಿ ಪ್ರೋತ್ಸಾಹ ನುಡಿ

ಪಿಟಿಐ
Published 19 ಜುಲೈ 2021, 20:25 IST
Last Updated 19 ಜುಲೈ 2021, 20:25 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಲಸಿಕೆಯನ್ನು ಬಾಹುಗೆ(ತೋಳು) ನೀಡಲಾಗುತ್ತಿದೆ. ಹೀಗಾಗಿ, ಲಸಿಕೆ ಪಡೆದವರು ಬಾಹುಬಲಿಯಾಗುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಸಂಸತ್‌ ಅಧಿವೇಶನಕ್ಕೂ ಮುನ್ನ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಸಿಕಾ ಅಭಿಯಾನವು ದೇಶದಲ್ಲಿ ತೀವ್ರಗೊಂಡಿದ್ದು, ಇದುವರೆಗೆ ಸುಮಾರು 40 ಕೋಟಿ ಮಂದಿ ಬಾಹುಬಲಿಗಳಾಗಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಧಾನಿ ಅವರ ಹೇಳಿಕೆಗೆ ನೆಟ್ಟಿಗರು, ‘ಬಾಹುಬಲಿ’ ಸಿನಿಮಾ ಪ್ರಸ್ತಾಪಿಸಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಹೌದು. ಅರ್ಥಪೂರ್ಣವಾಗಿದೆ. ಬಾಹುಬಲಿಯ ಎರಡು ಭಾಗಗಳಿವೆ. ಡೋಸ್‌ 1 ಮತ್ತು ಡೋಸ್‌ 2’ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಕೊರೊನಾ ವೈರಸ್‌ ಕಟಪ್ಪಾ ರೀತಿಯದ್ದು. ಈ ವೈರಸ್‌ ಬೆನ್ನ ಹಿಂದೆಯೇ ಮತ್ತೆ ದಾಳಿ ಮಾಡುತ್ತದೆ. ಜೀವನದಲ್ಲಿ ನಾವು ನಿರ್ಲಕ್ಷ್ಯವಹಿಸಬಾರದು’ ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.