ADVERTISEMENT

25 ಸಾವಿರ ಶೋಷಿತ ಮಹಿಳೆಯರ ಜಾಥಾ

ಪಿಟಿಐ
Published 22 ಫೆಬ್ರುವರಿ 2019, 19:04 IST
Last Updated 22 ಫೆಬ್ರುವರಿ 2019, 19:04 IST
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಾವಿರಾರು ಮಹಿಳೆಯರು ‘ರಾಷ್ಟ್ರೀಯ ಗ್ರಾಮೀಣ ಅಭಿಯಾನ’ ಜಾಥಾ ನಡೆಸಿದರು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಾವಿರಾರು ಮಹಿಳೆಯರು ‘ರಾಷ್ಟ್ರೀಯ ಗ್ರಾಮೀಣ ಅಭಿಯಾನ’ ಜಾಥಾ ನಡೆಸಿದರು.    

ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಾವಿರಾರು ಮಹಿಳೆಯರು ‘ರಾಷ್ಟ್ರೀಯ ಗ್ರಾಮೀಣ ಅಭಿಯಾನ’ ಜಾಥಾ ನಡೆಸಿದರು.

ನೊಂದವರಿಗೆ ನ್ಯಾಯ ದೊರಕಿಸಿ ಎಂಬ ಬೇಡಿಕೆಯೊಂದಿಗೆ ಡಿಸೆಂಬರ್‌ 20ರಿಂದ ಮುಂಬೈನಿಂದ ನಡಿಗೆ ಆರಂಭಿಸಿ ದೆಹಲಿ ತಲುಪಿರುವ ಮಹಿಳೆಯರು ಶುಕ್ರವಾರ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಸಿದರು.

ಶೋಷಣೆಗೊಳಗಾದ ಮಹಿಳೆಯರು, ಬಾಲಕಿಯರು 200 ಜಿಲ್ಲೆ, 24 ರಾಜ್ಯಗಳ ಮೂಲಕ 10 ಸಾವಿರ ಕಿ.ಮೀ ಕ್ರಮಿಸಿ ದೆಹಲಿ ತಲುಪಿದ ಮಹಿಳೆಯರು ನ್ಯಾಯಕ್ಕಾಗಿ ಆಗ್ರಹಿಸಿದರು.

ADVERTISEMENT

25 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಭನ್ವಾರಿ ದೇವಿ (56) ಜಾಥಾದಲ್ಲಿ ಭಾಗವಹಿಸಿದ್ದರು. ‘ನನ್ನನ್ನು ಸುಮ್ಮನಿರಿಸಲಾಗುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಡುವೆ., ಇನ್ನಾದರೂ ನ್ಯಾಯ ದೊರಕಿಸಿ ಕೊಡಿ’ ಎಂದು ಆಗ್ರಹಿಸಿದರು. ದೇಶದ 250 ಜಿಲ್ಲೆಗಳಿಂದ 25 ಸಾವಿರ ಶೋಷಿತ ಮಹಿಳೆಯರು ಹಾಗೂ ಅವರ ಕುಟುಂಬದವರನ್ನು ‘ದ ನ್ಯಾಷ್ಲ್ನಲ್ ನೆಟ್‌ವರ್ಕ್‌ ಆಫ್‌ ಸರ್ವೈವರ್ಸ್‌’ ಸಂಸ್ಥೆ ಸಂಘಟಿಸಿದೆ.

ಜನರಲ್ಲಿ ಜಾಗೃತಿ ಮೂಡಿದೆ. ಲೈಂಗಿಕ ದೌರ್ಜನ್ಯವಿನ್ನು ಸಹಿಸಲಾಗದು. ನ್ಯಾಯ ದೊರೆಯುವವರೆಗೂ ಸುಮ್ಮನಿರಲಾಗದು ಎಂಬರ್ಥದ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.