ADVERTISEMENT

ಪಂಜಾಬ್: ಮಹಿಳಾ ಆಯೋಗದ ಅಧ್ಯಕ್ಷೆ ಬೆದರಿಕೆ ಕರೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 18:27 IST
Last Updated 10 ಜುಲೈ 2019, 18:27 IST
ಮನೀಷಾ ಗುಲಾಟಿ
ಮನೀಷಾ ಗುಲಾಟಿ   

ಚಂಡಿಗಡ: ’ಹಾಡುಗಳಲ್ಲಿ ಅಶ್ಲೀಲ ಸಾಹಿತ್ಯ ಬಳಸಿರುವ ಆರೋಪದಲ್ಲಿ ರ‍್ಯಾಪ್‌ ಗಾಯಕ ಯೊ ಯೊ ಹನಿ ಸಿಂಗ್‌ ವಿರುದ್ಧ ದೂರು ನೀಡಿದ ಬಳಿಕ ಬೆದರಿಕೆ ಕರೆಗಳು ಬರುತ್ತಿವೆ‘ ಎಂದು ಪಂಜಾಬ್‌ನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಷಾ ಗುಲಾಟಿ ದೂರಿದ್ದಾರೆ.

ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲೂ ನಿಂದನಾತ್ಮಕ ಸಂದೇಶಗಳು ಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

‘ಮಖ್ನಾ‘ ಎಂಬ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಬಳಸಿರುವ ಆರೋಪದಲ್ಲಿ ಹನಿ ಸಿಂಗ್‌ ಹಾಗೂ ಸಂಗೀತ ನಿರ್ಮಾಪಕ ಭೂಷಣ್‌ ಕುಮಾರ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

’ನಾನು ಯಾರಿಗೂ ಹೆದರುವುದಿಲ್ಲ. ಈ ವಿಷಯದ ಬಗ್ಗೆ ಹೋರಾಟ ಮುಂದುವರಿಸುತ್ತೇನೆ. ಬೆದರಿಕೆ ಕರೆಗಳು ಬರುತ್ತಿ
ರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ‘ ಎಂದು ಮನೀಷಾ ಹೇಳಿದ್ದಾರೆ.

ಅದಷ್ಟು ಶೀಘ್ರ ಹನಿಸಿಂಗ್‌ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.