ADVERTISEMENT

ಚೀನಾದಲ್ಲಿ ಸರಣಿ ಭೂಕಂಪ: ಮೂವರು ಸಾವು, 27 ಮಂದಿಗೆ ಗಾಯ

ಪಿಟಿಐ
Published 22 ಮೇ 2021, 6:52 IST
Last Updated 22 ಮೇ 2021, 6:52 IST
ಭೂಕಂಪ ಭೀತಿಯಿಂದ ಚೀನಾದ ಯುನಾನ್‌ ಪ್ರಾಂತ್ಯದ ಜನ ಮನೆಗಳಿಂದ ಹೊರಗೆ ಉಳಿದುಕೊಂಡಿದ್ದರು. (ರಾಯಿಟರ್ಸ್‌ ಚಿತ್ರ)
ಭೂಕಂಪ ಭೀತಿಯಿಂದ ಚೀನಾದ ಯುನಾನ್‌ ಪ್ರಾಂತ್ಯದ ಜನ ಮನೆಗಳಿಂದ ಹೊರಗೆ ಉಳಿದುಕೊಂಡಿದ್ದರು. (ರಾಯಿಟರ್ಸ್‌ ಚಿತ್ರ)   

ಬೀಜಿಂಗ್‌: ‘ಚೀನಾದ ಯುನ್ನಾನ್ ಪ್ರಾಂತ್ಯದ ಯಾಂಗ್ಬಿ ಯಿ ಎಂಬ ಸ್ವಾಯತ್ತ ಪ್ರಾಂತ್ಯದಲ್ಲಿ ಶುಕ್ರವಾರ ಸರಣಿ ಭೂಕಂಪ ಸಂಭವಿಸಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. 27 ಮಂದಿಗೆ ಗಾಯಗಳಾಗಿವೆ’ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.

‘ಎಲ್ಲ 12 ಪ್ರಾಂತ್ಯಗಳಲ್ಲಿ ಹಾಗೂ ಡಾಲಿ ಬಾಯಿ ಸ್ವಾಯತ್ತ ಪ್ರಾಂತ್ಯದ ನಗರಗಳಲ್ಲಿ ಭೂಕಂಪದ ಅನುಭವವಾಗಿದ್ದು, ಯಾಂಗ್ಬಿ ಯಿಯಲ್ಲಿ ಅತಿ ಹೆಚ್ಚು ಹಾನಿಯಾಗಿದೆ’ ಎಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಚೀನಾದ(ಸಿಪಿಸಿ) ಮುಖ್ಯಸ್ಥ ಯಾಂಗ್ ಗುವಜಾಂಗ್ ಹೇಳಿದ್ದಾರೆ.

‘ಭೂಕಂಪನದಿಂದಾಗಿ ಯಾಂಗ್ಬಿಯಲ್ಲಿ ಇಬ್ಬರು ಮತ್ತು ಯೋಂಗ್ಪಿಂಗ್ ಪ್ರಾಂತ್ಯದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 27 ಮಂದಿಗೆ ಗಾಯಗಳಾಗಿದ್ದು, ಇದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.