ADVERTISEMENT

ಮಣಿಪುರದಲ್ಲಿ ಮೂವರು ಬಂಡುಕೋರರ ಸೆರೆ

ಪಿಟಿಐ
Published 1 ಜುಲೈ 2025, 13:27 IST
Last Updated 1 ಜುಲೈ 2025, 13:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂಫಾಲ್: ಮಣಿಪುರದ ಪೂರ್ವ ಇಂಫಾಲ್ ಮತ್ತು ತೌಬಾಲ್‌ ಜಿಲ್ಲೆಗಳಲ್ಲಿ ಸುಲಿಗೆ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದ್ದ ವಿವಿಧ ನಿಷೇಧಿತ ಸಂಘಟನೆಗಳ ಮೂವರು ಬಂಡುಕೋರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಯುನೈಟೆಡ್‌ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌(ಪಿ), ಕಂಗ್ಲೀಪಾಕ್‌ ಕಮ್ಯುನಿಸ್ಟ್‌ ಪಾರ್ಟಿ(ಪಿಡಬ್ಲ್ಯುಜಿ) ಮತ್ತು  ಪ್ರಿಪಕ್‌(ಪ್ರೊ) ಸಂಘಟನೆಗಳ ಮೂವರನ್ನು ಭೂವಿವಾದ, ಮಹಿಳೆಯರ ಮೇಲೆ ದೌರ್ಜನ್ಯ, ಹಣಕಾಸು ವಂಚನೆ, ಅಪಹರಣ, ಬಂಡುಕೋರರ ನೇಮಕ ಹೀಗೆ ಹಲವು ಆರೋಪಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಎರಡು ವರ್ಷದ ಹಿಂದೆ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಆರಂಭವಾದ ದಿನದಿಂದ ಈವರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಗಳನ್ನು ನಡೆಸಿ ಹಲವರನ್ನು ವಶಕ್ಕೆ ಪಡೆದಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.