ADVERTISEMENT

ಮಹಿಳೆಗೆ ಥಳಿಸಿದ ವಿಡಿಯೊ ವೈರಲ್: ಎಂಎನ್‌ಎಸ್‌ನ ಮೂವರು ಕಾರ್ಯಕರ್ತರ ಬಂಧನ

ಪಿಟಿಐ
Published 2 ಸೆಪ್ಟೆಂಬರ್ 2022, 11:05 IST
Last Updated 2 ಸೆಪ್ಟೆಂಬರ್ 2022, 11:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಸಾರ್ವಜನಿಕವಾಗಿ ಮಹಿಳೆಗೆ ಥಳಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

ಆ. 28ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಒಂದು ದಿನ ಮೊದಲು ಬಂಧಿಸಿದ್ದರು. ಮಧ್ಯ ಮುಂಬೈನ ಕಾಮಾಠಿಪುರ ಪ್ರದೇಶದಲ್ಲಿ ತನ್ನ ಅಂಗಡಿ ಮುಂದೆ ಜಾಹೀರಾತು ಫಲಕ ಅಳವಡಿಸಲು ಸ್ಥಳೀಯ ಎಂಎನ್‌ಎಸ್ ಕಾರ್ಯಕರ್ತರು ಕಂಬ ಹಾಕುವುದಕ್ಕೆ ಮಹಿಳೆ ಆಕ್ಷೇಪಿಸಿದ್ದರು. ಇದು ಗಲಾಟೆಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್‌ನ ಸ್ಥಳೀಯ ಪದಾಧಿಕಾರಿ ವಿನೋದ್ ಅರ್ಗಿಲೆ ಮತ್ತು ಇತರೆ ಇಬ್ಬರು ಪಕ್ಷದ ಕಾರ್ಯಕರ್ತರು ಮಹಿಳೆಗೆ ಕಪಾಳ ಮೋಕ್ಷ ಮಾಡಿ, ತಳ್ಳುವುದು ಮತ್ತು ನಿಂದನೆ ಮಾಡಿರುವ ದೃಶ್ಯ ವಿಡಿಯೊದಲ್ಲಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಗುರುವಾರ ನಾಗ್‌ಪಾಡಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 (ಹಲ್ಲೆ), 506 (ಅಪರಾಧ ಬೆದರಿಕೆ) ಮತ್ತು 509 (ಮಹಿಳೆಯರನ್ನು ಕೆರಳಿಸುವ ಉದ್ದೇಶ) ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಆರೋಪಿಗಳನ್ನು ತಡ ರಾತ್ರಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಗೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವಿಡಿಯೊ ಇಲ್ಲಿದೆ;

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.