ADVERTISEMENT

ಲಂಚ ಕೇಳಿದ ಆರೋಪ : ಎನ್ ಐಎ ಮೂವರು ತನಿಖಾಧಿಕಾರಿಗಳ ಎತ್ತಂಗಡಿ

ಏಜೆನ್ಸೀಸ್
Published 20 ಆಗಸ್ಟ್ 2019, 11:45 IST
Last Updated 20 ಆಗಸ್ಟ್ 2019, 11:45 IST
   

ನವದೆಹಲಿ:ಲಂಚ ಕೇಳಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಮೂವರು ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.

ಭಯೋತ್ಪಾದನೆಗೆ ಹಣ ಸರಬರಾಜು ಮಾಡಿದ ಆರೋಪದ ಹೊತ್ತಿರುವ ಪಾಕಿಸ್ತಾನ ಮೂಲದ ಉಗ್ರ ಹಫೀಜ್ ಸಯೀದ್ ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿ.

ಭಯೋತ್ಪಾದನೆ ನಿರ್ಮೂಲನೆಗಾಗಿಯೇ ಪ್ರತ್ಯೇಕವಾಗಿ ರಚಿಸಲಾಗಿರುವ ಸಂಸ್ಥೆ ಇದಾಗಿದೆ. ಭಾರತದಲ್ಲಿ ಭಯೋತ್ಪಾದನೆ ಹುಟ್ಟುಹಾಕಲು ಉಗ್ರರು ಹಣ ಸರಬರಾಜು ಮಾಡುವುದನ್ನು ಪತ್ತೆ ಹಚ್ಚಿ ಅದನ್ನು ತಡೆಯುವುದು ಈ ಏಜೆನ್ಸಿಯ ಪ್ರಮುಖ ಉದ್ದೇಶವಾಗಿದೆ. ಎಸ್ಪಿ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಈ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೂವರನ್ನು ಅವರಿಗೆ ನೀಡಿದ್ದ ಜವಾಬ್ದಾರಿಯಿಂದ ತೆಗೆದುಹಾಕಿ ಬೇರೆಡೆಗೆ ವರ್ಗಾಯಿಸಲಾಗಿದೆ. ಮುೂವರು ಆರೋಪಿಗಳ ವಿರುದ್ದ ವಿಚಾರಣೆ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಮೂವರು ಅಧಿಕಾರಿಗಳು ಅಧಿಕಾರ ದುರಪಯೋಗದ ಬಗ್ಗೆ ದೂರು ಕೇಳಿ ಬಂದಿತ್ತು. ಇದನ್ನು ಆಧರಿಸಿ ವಿಚಾರಣೆ ನಡೆಸಿದಾಗ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಏಜೆನ್ಸಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಡಿಐಜಿ ಮಟ್ಟದ ಅಧಿಕಾರಿಯಿಂದ ಆರೋಪಿತ ಅಧಿಕಾರಿಗಳ ವಿಚಾರಣೆ ನಡೆಸಲಾಗುವುದು. ದುಬೈ ಮೂಲಕ ಪಾಕಿಸ್ತಾನದಿಂದ ಹಣ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಮುಂಬೈನ ವ್ಯಾಪಾರಿಯೊಬ್ಬನನ್ನು ಎನ್ಐಎ ವಿಚಾರಣೆಗೆ ಒಳಪಡಿಸಿತ್ತು. ಈ ಸಮಯದಲ್ಲಿ ಆರೋಪಿತ ಅಧಿಕಾರಿಗಳು ವ್ಯಾಪಾರಿಯಿಂದ ಲಂಚ ಕೇಳಿದ್ದರು ಎನ್ನಲಾಗಿದೆ.
26/11 ಮುಂಬಯಿ ದಾಳಿ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ನಡೆಸಲೆಂದೇ ಪ್ರತ್ಯೇಕವಾಗಿ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.