ADVERTISEMENT

3 ವರ್ಷ ವಕೀಲಿಕೆ ಕಡ್ಡಾಯ ನಿಯಮ | ಹಿಂದಿನ ಅಧಿಸೂಚನೆಗಳಿಗೆ ಅನ್ವಯಿಸದು: SC

ಪಿಟಿಐ
Published 28 ಜುಲೈ 2025, 15:30 IST
Last Updated 28 ಜುಲೈ 2025, 15:30 IST
   

ನವದೆಹಲಿ: ಕಾನೂನು ಪದವೀಧರರು ನ್ಯಾಯಾಧೀಶರಾಗಬೇಕಾದರೆ ಕಡ್ಡಾಯವಾಗಿ ಮೂರು ವರ್ಷ ವಕೀಲರಾಗಿ ಕಾರ್ಯನಿರ್ವಹಿಸಿರಬೇಕು ಎಂಬ ನಿಯಮವು, ಈ ಕುರಿತ ತೀರ್ಪು ಹೊರಬೀಳುವ ಮೊದಲು ಹೊರಡಿಸಿದ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಜಮ್ಮು–ಕಾಶ್ಮೀರ ನಾಗರಿಕ ಸೇವಾ ಆಯೋಗವು ಮೇ 14ರಂದು ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ, ಮೂರು ವರ್ಷ ವಕೀಲಿಕೆ ಕಡ್ಡಾಯ ಎಂಬ ನಿಯಮವನ್ನು ಉಲ್ಲೇಖಿಸಿಲ್ಲ ಎಂದು ಆಕ್ಷೇಪಿಸಿ ವಕೀಲರಾದ ನವೀದ್‌ ಭುಕ್ತಿಯಾ ಮತ್ತು ಇತರ ಐವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.

ಮುಖ್ಯ ನ್ಯಾಯಾಮೂರ್ತಿ ಬಿ.ಆರ್‌. ಗವಾಯಿ ನೇತೃತ್ವದ ಪೀಠವು ಮೂರು ವರ್ಷ ವಕೀಲಿಕೆ ಕಡ್ಡಾಯ ಕುರಿತು  ಮೇ 20ರಂದು ತೀರ್ಪು ನೀಡಿತ್ತು.

ADVERTISEMENT

‘ಮೇ 20ರ ತೀರ್ಪು ಮುಂದಿನ ನ್ಯಾಯಾಂಗ ನೇಮಕಾತಿಗೆ ಅನ್ವಯಿಸುತ್ತದೆ. ಈಗಾಗಲೇ ಆರಂಭಗೊಂಡಿರುವ ನೇಮಕಾತಿ ಪ್ರಕ್ರಿಯೆಗಳಿಗೆ ಅನ್ವಯಿಸದು’ ಎಂದು ಮುಖ್ಯ ನ್ಯಾಯಾಮೂರ್ತಿ ಗವಾಯಿ, ನ್ಯಾಯಾಮೂರ್ತಿಗಳಾದ ಕೆ. ವಿನೋದ್‌ಚಂದ್ರನ್‌ ಮತ್ತು ಎನ್‌.ವಿ ಅಂಜಾರಿಯಾ ಅವರನ್ನು ಒಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.