ADVERTISEMENT

ಹುಲಿಗಣತಿ ವರದಿ ಬಿಡುಗಡೆ ಇಂದು

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 18:30 IST
Last Updated 28 ಜುಲೈ 2019, 18:30 IST

ನವದೆಹಲಿ: ನಾಲ್ಕನೇ ಹುಲಿಗಣತಿಯ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಡುಗಡೆ ಮಾಡಲಿದ್ದಾರೆ.

2006ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿ ಗಣತಿ ನಡೆಸಲಾಗುತ್ತಿದೆ. 2006, 2010 ಮತ್ತು 2014ರಲ್ಲಿ ಗಣತಿ ನಡೆಸಲಾಗಿತ್ತು.2018ರ ಗಣತಿಯ ವರದಿ ಸೋಮವಾರ ಬಿಡುಗಡೆಯಾಗಲಿದೆ. ಹುಲಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳು ಪರಿಣಾಮ ಬೀರಿವೆಯೇ ಎಂಬುದನ್ನು ಈ ವರದಿಯು ವಿವರಿಸಲಿದೆ.

ಈ ಬಾರಿ ಗಣತಿಗೆ 14,000 ಕ್ಯಾಮರಾ ಟ್ರ್ಯಾಪ್‌ಗಳನ್ನು ಬಳಸಲಾಗಿತ್ತು. 2014ರಲ್ಲಿ ಇಂತಹ ಕ್ಯಾಮೆರಾಗಳ ಸಂಖ್ಯೆ 9,735 ಇತ್ತು.

ADVERTISEMENT

2014ರ ಗಣತಿಯಲ್ಲಿ ದೇಶದಲ್ಲಿ 2,226 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು.2014ರ ಗಣತಿಯಲ್ಲಿ ಕರ್ನಾಟಕದಲ್ಲಿ 406 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಇದು ದೇಶದಲ್ಲೇ ಹೆಚ್ಚು. ಕರ್ನಾಟಕದ ನಂತರ ಹೆಚ್ಚು ಹುಲಿಗಳಿರುವ ರಾಜ್ಯಗಳಾಗಿ ಉತ್ತರಾಖಂಡ (340) ಮತ್ತು ಮಧ್ಯಪ್ರದೇಶ (308) ಹೊರಹೊಮ್ಮಿದ್ದವು. ಈ ಬಾರಿಯ ಗಣತಿಯಲ್ಲಿ ಈ ಸ್ಥಾನಗಳು ಬದಲಾಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.