ADVERTISEMENT

'ಭಾರತದ ದೊಡ್ಡ ಪಪ್ಪು': ಟಿ–ಶರ್ಟ್ ಮೇಲೆ ಶಾ ವ್ಯಂಗ್ಯಚಿತ್ರ ಮುದ್ರಿಸಿ ಟಿಎಂಸಿ ಅಣಕ

ಪಿಟಿಐ
Published 9 ಸೆಪ್ಟೆಂಬರ್ 2022, 12:44 IST
Last Updated 9 ಸೆಪ್ಟೆಂಬರ್ 2022, 12:44 IST
ಚಿತ್ರಕೃಪೆ: @DrRijuDutta_TMC
ಚಿತ್ರಕೃಪೆ: @DrRijuDutta_TMC   

ಕೋಲ್ಕತ್ತ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಲು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ತನ್ನ ಕಾರ್ಯಕರ್ತರಿಗೆಂದುಟಿ–ಶರ್ಟ್‌ ವಿನ್ಯಾಸಗೊಳಿಸಿದೆ.

ಟಿ–ಶರ್ಟ್‌ನಲ್ಲಿ ಅಮಿತ್ ಶಾ ಅವರ ವ್ಯಂಗ್ಯಚಿತ್ರವಿದ್ದು ಅದರ ಕೆಳಗೆ ‘ಭಾರತದ ಅತಿದೊಡ್ಡ ಪಪ್ಪು’ ಎಂದು ಬರೆದಿದೆ. ವಿವಿಧ ಬಣ್ಣಗಳಲ್ಲಿ ಟಿ ಶರ್ಟ್‌ ಲಭ್ಯವಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಬಿಜೆಪಿ ‘ಪಪ್ಪು’ ಎಂದು ಕರೆಯುವ ಮೂಲಕ ಅಪಹಾಸ್ಯ ಮಾಡುತ್ತಿತ್ತು. ಸದ್ಯ ಟಿಎಂಸಿ, ಅಮಿತ್‌ ಶಾ ಅವರನ್ನು ಅದೇ ಹೆಸರಿನಿಂದ ಕರೆಯುವ ಮೂಲಕ ಅಣಕ ಮಾಡಲು ಮುಂದಾಗಿದೆ. ಪಶ್ಚಿಮ ಬಂಗಾಳದ ವಿವಿಧೆಡೆ ನಡೆಯಲಿರುವ ದುರ್ಗಾ ಪೂಜೆಯ ಸಂದರ್ಭದಲ್ಲೇ ಈ ಪ್ರಚಾರ ಆಂದೋಲನ ನಡೆಸಲು ಪಕ್ಷ ಉತ್ಸುಕವಾಗಿದೆ.

‘ಅಪಹಾಸ್ಯ ಅಥವಾ ಅಣಕ ಸಂವಹನದ ಪ್ರಮುಖ ವಿಧ. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಂದ ಈ ರೀತಿಯ ಅಣಕ ಆರಂಭವಾಯಿತು. ಜಾಲತಾಣದಲ್ಲಿ ಇದು ಜನಪ್ರಿಯವಾಯಿತು. ಈಗ ಇದೇ ಟಿ– ಶರ್ಟ್‌ ರೂಪ ಪಡೆದಿದೆ. ಮೊದಲಿಗೆ ಆನ್‌ಲೈನ್‌ನಲ್ಲಿ ಶರ್ಟುಗಳು ಲಭ್ಯವಿದ್ದವು. ಈಗ ಸಗಟು ಮಾರುಕಟ್ಟೆಯಲ್ಲೂ ಲಭ್ಯವಿವೆ’ ಎಂದು ಟಿಎಂಸಿ ರಾಜ್ಯಸಭಾ ನಾಯಕ ಡೆರೆಕ್ ಓಬ್ರಿಯಾನ್ ತಿಳಿಸಿದ್ದಾರೆ.

ADVERTISEMENT

ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಕಾರ್ಯಕರ್ತರು ಈ ಟಿ–ಶರ್ಟ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.