ADVERTISEMENT

ಬಿಜೆಪಿ ಸೇರಿದ ಮತ್ತೊಬ್ಬ ಟಿಎಂಸಿ ಶಾಸಕ

ಪಿಟಿಐ
Published 29 ಮೇ 2019, 18:49 IST
Last Updated 29 ಮೇ 2019, 18:49 IST

ನವದೆಹಲಿ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ಮತ್ತೊಬ್ಬ ಶಾಸಕ ಬುಧವಾರ ಬಿಜೆಪಿ ಸೇರಿದ್ದಾರೆ.

ಮೊನಿರುಲ್‌ ಇಸ್ಲಾಂ ಬಿಜೆಪಿ ಸೇರಿದ ಶಾಸಕ. ಮಂಗಳವಾರ ಇಬ್ಬರು ಟಿಎಂಸಿ ಶಾಸಕರು ಮತ್ತು 50 ಪಾಲಿಕೆ ಸದಸ್ಯರು ಬಿಜೆಪಿ ಸೇರಿದ್ದರು.

ಇಸ್ಲಾಂ ಜತೆ ಮಾಜಿ ಶಾಸಕ ಗಧಾದರ್ ಹಜ್ರಾ ಸಹ ಬಿಜೆಪಿ ಸೇರಿದ್ದಾರೆ.

ADVERTISEMENT

’ಮೊನಿರುಲ್‌ ಇಸ್ಲಾಂ ಬಿಜೆಪಿ ಸೇರಿರುವುದು ಅತ್ಯಂತ ಮಹತ್ವದ್ದಾಗಿದೆ. ಅಲ್ಪಸಂಖ್ಯಾತರ ವಿಶ್ವಾಸಗಳಿಸಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಇದು ಬಿಂಬಿಸಿದೆ‘ ಎಂದು ಬಿಜೆಪಿ ನಾಯಕ ಮುಕುಲ್‌ ರಾಯ್‌ ತಿಳಿಸಿದ್ದಾರೆ.

’ಮೋದಿ ಅವರ ಅಭಿವೃದ್ಧಿ ಕಾರ್ಯಸೂಚಿಯಿಂದಾಗಿ ಬಿಜೆಪಿ ಸೇರಿದ್ದೇನೆ‘ ಎಂದು ಇಸ್ಲಾಂ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನೂ ಹಲವು ಟಿಎಂಸಿ ಶಾಸಕರು ಬಿಜೆಪಿ ಸೇರಲಿದ್ದಾರೆ. ಶೀಘ್ರದಲ್ಲೇ ಆರು ಟಿಎಂಸಿ ಶಾಸಕರು ಬಿಜೆಪಿ ಸೇರಲಿದ್ದಾರೆ. ಇವರಲ್ಲಿ ನಾಲ್ವರು ದಕ್ಷಿಣ ಪಶ್ಚಿಮ ಬಂಗಾಳದ ಶಾಸಕರು ಮತ್ತು ಇಬ್ಬರು ಉತ್ತರ ಪಶ್ಚಿಮ ಬಂಗಾಳ ಶಾಸಕರು ಇದ್ದಾರೆ. ಇವರ ಜತೆಗೆ, ಕೆಲವು ಮಾಜಿ ಸಂಸದರು ಸಹ ಸೇರಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಮುಸ್ಲಿಂ ಶಾಸಕ ತಮ್ಮ ಪಕ್ಷ ಸೇರಿರುವುದನ್ನು ಬಿಜೆಪಿ ಮುಖಂಡರು ಹರ್ಷದಿಂದ ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯಾದ ’ಸಬ್ಕಾ ಸಾತ್‌, ಸಬ್ಕಾ ವಿಕಾಸ್‌, ಸಬ್ಕಾ ವಿಶ್ವಾಸ್‌‘ನಲ್ಲಿ ವಿಶ್ವಾಸವಿಟ್ಟು ಮುಸ್ಲಿಂ ಶಾಸಕರು ತಮ್ಮ ಪಕ್ಷ ಸೇರಿದ್ದಾರೆ ಎಂದು ಮುಖಂಡರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.