ADVERTISEMENT

‘ಗರ್ಭಿಣಿಯರ ಪೌಷ್ಟಿಕ ಆಹಾರ ಯೋಜನೆಯಿಂದ ಸರ್ಕಾರಕ್ಕೆ ₹77 ಕೋಟಿ ನಷ್ಟ’

ಪಿಟಿಐ
Published 5 ಜೂನ್ 2022, 13:43 IST
Last Updated 5 ಜೂನ್ 2022, 13:43 IST
ಕೆ. ಅಣ್ಣಾಮಲೈ
ಕೆ. ಅಣ್ಣಾಮಲೈ   

ಚೆನ್ನೈ (ಪಿಟಿಐ): ‘ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ನೀಡುವ ಯೋಜನೆಯಲ್ಲಿ ರಾಜ್ಯ ಸರ್ಕಾರ ಖಾಸಗಿ ಸಂಸ್ಥೆ ಜೊತೆಗೆ ಶಾಮೀಲಾಗಿದ್ವು, ಬೊಕ್ಕಸಕ್ಕೆ ₹77 ಕೋಟಿ ನಷ್ಟವಾಗಿದೆ’ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗರ್ಭಿಣಿಯರಿಗೆಪೌಷ್ಟಿಕ ಆಹಾರದ ಕಿಟ್‌ಗಳ ಭಾಗವಾಗಿ ನೀಡಲಾಗುವ ಆರೋಗ್ಯ ಮಿಶ್ರಣ ಹಾಗೂ ಕಬ್ಬಿಣದಂಶದ ಪೂರಕವನ್ನು ವಿತರಿಸುತ್ತರುವ ಖಾಸಗಿ ಸಂಸ್ಥೆಯು ಸರ್ಕಾರಿ ಒಡೆತನದ ಸಂಸ್ಥೆಗಳಿಗಿಂತ ಹೆಚ್ಚಿನ ದರವನ್ನು ಹೊಂದಿದೆ’ ಎಂದು ಹೇಳಿದರು.

‘ಖರ್ಚುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ತಾಂತ್ರಿಕ ಸಲಹಾ ಸಮಿತಿಯು, ಆರೋಗ್ಯ ಮಿಶ್ರಣವನ್ನು ಪೂರೈಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಯಿಂದ ಸರ್ಕಾರಿ ಒಡೆತನದ ಆವಿನ್‌ ಸಂಸ್ಥೆಗೆ ನೀಡಬೇಕೆಂದು ನಿರ್ಧರಿಸಿತ್ತು. ಆದರೆ ಕೆಲವರ ಆದೇಶದಿಂದ ಈ ನಿರ್ಧಾರವನ್ನು ಬದಲಾಯಿಸಬೇಕಾಯಿತು’ ಎಂದು ಅಣ್ಣಾಮಲೈ ತಿಳಿಸಿದರು.

ADVERTISEMENT

‘ಈಗ ಖಾಸಗಿ ಸಂಸ್ಥೆ ಪೂರೈಸುತ್ತಿರುವ ಆರೋಗ್ಯ ಮಿಶ್ರಣದಿಂದ ₹45 ಕೋಟಿ ಹಾಗೂ ಕಬ್ಬಿಣದಂಶದ ಪೂರಕ ಆಹಾರದಿಂದ ₹32 ಕೋಟಿ, ಒಟ್ಟು 77 ಕೋಟಿ ನಷ್ಟವುಂಟಾಗಿದೆ. ಹಾಗಾಗಿ ಆರೋಗ್ಯ ಮಿಶ್ರಣದ ಪೂರೈಕೆಯ ಜವಾಬ್ದಾರಿಯನ್ನು ಸರ್ಕಾರದ ಹಾಲು ಸಹಕಾರಿ ಸಂಸ್ಥೆಯಾದ ಆವಿನ್‌ಗೆ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.