ಚೆನ್ನೈ: ಎಐಡಿಎಂಕೆ ನಾಯಕ ಹಾಗೂ ತಮಿಳುನಾಡು ಮಾಜಿ ಸಚಿವ ಸಿ. ವಿಜಯಬಾಸ್ಕರ್ ವಿರುದ್ಧ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ) ಶೋಧ ಕಾರ್ಯಾಚರಣೆ ನಡೆಸಿದೆ. ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಸಮೂಹ ಹಾಗೂ ಪ್ರತ್ಯೇಕ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ಶೋಧ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎರಡೂ ಪ್ರಕರಣಗಳ ತನಿಖೆ ಭಾಗವಾಗಿ ವಿಜಯಬಾಸ್ಕರ್ ಅವರಿಗೆ ಸೇರಿದ್ದ ಒಟ್ಟು 25 ಸ್ಥಳಗಳಲ್ಲಿ ಇ.ಡಿ ಶೋಧ ನಡೆಸಿದೆ. 2022ರ ರಾಜ್ಯ ವಿಜಿಲೆನ್ಸ್ (ಡಿವಿಎಸಿ) ತನಿಖೆಯ ಆಧಾರದ ಮೇಲೆ ಅಕ್ರಮ ಆಸ್ತಿಗಳನ್ನು ಹೊಂದಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಜಿಸ್ಕ್ವೇರ್’ ರಿಯಲ್ ಎಸ್ಟೇಟ್ ಸಮೂಹಕ್ಕೆ ಸೇರಿದ ಆವರಣಗಳು, ಚೆನ್ನೈ ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಇ.ಡಿ ಈ ಕಾರ್ಯಾಚರಣೆ ನಡೆಸಿದೆ.
ಈ ಹಿಂದೆ ಸಿಬಿಐ, ವಿಜಯಬಾಸ್ಕರ್ ಅವರ ವಿರುದ್ಧ ‘ಗುಟ್ಕಾ ಹಗರಣ’ ಪ್ರಕರಣವನ್ನು ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.