ADVERTISEMENT

ಕೆಳಹಂತದ ಪೊಲೀಸರಿಗೆ ಮೊಬೈಲ್‌ ಬಳಕೆ ನಿಷೇಧ

ತಮಿಳುನಾಡು ಪೊಲೀಸ್‌ ಇಲಾಖೆ ಮಹತ್ವದ ಆದೇಶ

ಪಿಟಿಐ
Published 27 ನವೆಂಬರ್ 2018, 20:08 IST
Last Updated 27 ನವೆಂಬರ್ 2018, 20:08 IST

ಚೆನ್ನೈ: ತಮಿಳುನಾಡಿನಲ್ಲಿ ಪಿಎಸ್‌ಐ ರ‍್ಯಾಂಕ್‌ ಕೆಳಗಿನ ಪೊಲೀಸ್‌ ಸಿಬ್ಬಂದಿಗೆ ಕರ್ತವ್ಯದ ವೇಳೆ ಮೊಬೈಲ್‌ ಬಳಕೆ ನಿಷೇಧಿಸಿ ಪೊಲೀಸ್‌ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಡಿಜಿಪಿ ಟಿ.ಕೆ.ರಾಜೇಂದಿರನ್‌ ಅವರು ಇತ್ತೀಚೆಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.

ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯ ಮೇಲಿನ ಅಧಿಕಾರಿಗಳು ಮಾತ್ರ ಇಲಾಖೆಯ ಕರ್ತವ್ಯದ ವೇಳೆ ಮೊಬೈಲ್‌ ಫೋನ್‌ ಬಳಸಬಹುದು. ಅದು ಸಹ, ಕರ್ತವ್ಯಕ್ಕೆ ಸಂಬಂಧಿಸಿದ ಮುಖ್ಯ ಉದ್ದೇಶಗಳಿಗೆ ಮಾತ್ರ ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.

ADVERTISEMENT

‘ಕಾನೂನು ಮತ್ತು ಸುವ್ಯವಸ್ಥೆ, ಗಣ್ಯರ ಭೇಟಿ ವೇಳೆ, ದೇವಸ್ಥಾನ ಮತ್ತು ಹಬ್ಬದ ಸಂದರ್ಭದ ಬಂದೋಬಸ್ತ್‌ ವೇಳೆಯಲ್ಲಿ ಉಳಿದ ರ‍್ಯಾಂಕ್‌ ಹಂತದ ಅಧಿಕಾರಿಗಳೂ ಮೊಬೈಲ್‌ ಬಳಸುವಂತಿಲ್ಲ’ ಎಂದು ತಿಳಿಸಲಾಗಿದೆ.

ಸಮವಸ್ತ್ರದಲ್ಲಿದ್ದ ಸಿಬ್ಬಂದಿ ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ನಿರತರಾಗಿರುವುದು ಗಮನಕ್ಕೆ ಬಂದಿದೆ. ಸೂಕ್ಷ್ಮ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರು, ಮೊಬೈಲ್‌ ಬಳಕೆ ಮಾಡುತ್ತಾ ವಾಟ್ಸ್‌ ಆ್ಯಪ್‌ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದರೆ, ಕರ್ತವ್ಯ ನಿರ್ವಹಣೆಗೆ ತೊಡಕು ಉಂಟಾಗುತ್ತದೆ.

ಪ್ರಮುಖ ಸಂದರ್ಭಗಳಲ್ಲಿ ಬಂದೋಬಸ್ತ್‌ಗೆ ನಿಯೋಜಿಸಲಾದ ಸಿಬ್ಬಂದಿ ಇತ್ತೀಚೆಗೆ ಕರ್ತವ್ಯ ಮರೆತು ಈ ರೀತಿವರ್ತಿಸುತ್ತಿರುವುದು ಕಂಡುಬಂದಿದೆ ಎಂದು ಸುತ್ತೋಲೆ ಪ್ರಸ್ತಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.