ನವದೆಹಲಿ : ರೈಲು ಸೇವೆಯು ಜೂನ್ 1ರಿಂದ ಪ್ರಾರಂಭವಾಗಲಿದ್ದು, ಸಂಚರಿಸುವ 100 ರೈಲುಗಳು ಪಟ್ಟಿಯನ್ನು ಬುಧವಾರ ರೈಲ್ವೆ ಇಲಾಖೆ ಪ್ರಟಕಿಸಿದೆ. ಗುರುವಾರದಿಂದ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ ಎಂದೂ ಹೇಳಿದೆ.
ಈ ರೈಲುಗಳಲ್ಲಿ ಎ.ಸಿ ಹಾಗೂ ಎ.ಸಿ ರಹಿತ ಕೋಚ್‌ಗಳು ಇರಲಿವೆ. ಎಲ್ಲವೂ ಕಾಯ್ದಿರಿಸಿದ ಸೀಟಿಗಳೇ ಆಗಿರುತ್ತವೆ. ಸ್ಥಳದಲ್ಲಿ ಟಿಕೆಟ್ ನೀಡುವುದು ಅಥವಾ ತತ್ಕಾಲ್ ಬುಕ್ಕಿಂಗ್‌ಗಳಿಗೆ ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸಾಮಾನ್ಯ ದರ್ಜೆ ಬೋಗಿಗಳನ್ನೂ ಕಾಯ್ದಿರಿಸಬೇಕಿದ್ದು, ಆದರೆ, ಇದಕ್ಕೆ ದ್ವಿತೀಯ ದರ್ಜೆ ಬೋಗಿಯ ದರವನ್ನು ನೀಡಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.