ADVERTISEMENT

ನಾಲ್ಕು ವರ್ಷದಲ್ಲಿ 73 ಸಾವಿರ ತೃತೀಯಲಿಂಗಿಗಳ ಬಂಧನ

ರೈಲುಗಳಲ್ಲಿ ಪ್ರಯಾಣಿಕರ ಸುಲಿಗೆ ಆರೋಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:45 IST
Last Updated 25 ಏಪ್ರಿಲ್ 2019, 20:45 IST
   

ನವದೆಹಲಿ (ಪಿಟಿಐ): ರೈಲು ಪ್ರಯಾಣಿಕರನ್ನು ಸುಲಿಗೆ ಮಾಡಿದ ಆರೋಪದ ಮೇಲೆ 73 ಸಾವಿರ ತೃತೀಯ ಲಿಂಗಿಗಳನ್ನು ಕಳೆದ ನಾಲ್ಕು ವರ್ಷದಲ್ಲಿ ಬಂಧಿಸಲಾಗಿದೆ. ಇವರಲ್ಲಿ ಕಳೆದ ಒಂದು ವರ್ಷದಲ್ಲೇ 20 ಸಾವಿರ ಮಂದಿ ಸೇರಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯಡಿ ಕೋರಿದ್ದ ಅರ್ಜಿಗೆ ರೈಲ್ವೆ ಸಚಿವಾಲಯ ಈ ವಿವರ ನೀಡಿದೆ.

ಎಲ್ಲೆಂದರಲ್ಲಿ ರೈಲು ಏರುವ ತೃತೀಯ ಲಿಂಗಿಗಳು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಾರೆ. ಈ ರೀತಿಯ ದೌರ್ಜನ್ಯದ ಬಗ್ಗೆ ದೂರುಗಳು ಕೇಳಿಬರುತ್ತಲೇ ಇದ್ದವು. ಕೆಲವು ಪ್ರಯಾಣಿಕರು ನಿಂದನೆಯನ್ನೂ ಎದುರಿಸಿದ್ದಾರೆ. ಹಣ ಕೊಡಲು ನಿರಾಕರಿಸುವ ಪ್ರಯಾಣಿಕರ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಿದ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೀತಿಯ ಪ್ರಕರಣಗಳನ್ನು ತಡೆಯಲು ರೈಲ್ವೆ ರಕ್ಷಣಾ ಪಡೆ ಆಗಾಗ ವಿಶೇಷ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.