ADVERTISEMENT

ಕೇರಳ: ಕಾಡಾನೆ ದಾಳಿಗೆ ಬುಡಕಟ್ಟು ಸಮುದಾಯದ ಯುವಕ ಸಾವು

ಪಿಟಿಐ
Published 14 ಏಪ್ರಿಲ್ 2025, 7:25 IST
Last Updated 14 ಏಪ್ರಿಲ್ 2025, 7:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತ್ರಿಶೂರ್ (ಕೇರಳ): ತ್ರಿಶೂರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ 20 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮುತುವನ್ ಸಮುದಾಯದ ಸೆಬಾಸ್ಟಿಯನ್ ಮೃತ ಯುವಕ. ಮಲಕ್ಕಪ್ಪರ ಪೊಲೀಸ್ ಠಾಣೆ ವ್ಯಾಪ್ತಿಯ ಬುಡಕಟ್ಟು ಹಳ್ಳಿಯೊಂದರಲ್ಲಿ ಭಾನುವಾರ ರಾತ್ರಿ ಮೂವರು ವ್ಯಕ್ತಿಗಳು ಜೇನುತುಪ್ಪ ಸಂಗ್ರಹಿಸಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

‌ಕತ್ತಲೆಯಲ್ಲಿ ಕಾಡಾನೆಯನ್ನು ನೋಡಿದ ಮೂವರು ಓಡಲು ಶುರು ಮಾಡಿದ್ದಾರೆ. ಓಡುವ ಭರದಲ್ಲಿ ಸೆಬಾಸ್ಟಿಯನ್ ಕೆಳಗೆ ಬಿದಿದ್ದಾರೆ. ಬಳಿಕ ಆನೆ ಅವರನ್ನು ತುಳಿದು ಕೊಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಚಾಲಕುಡಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.