ADVERTISEMENT

ರೈಲ್ವೆ ಬೋನಸ್‌ ಟ್ರೋಲ್‌ನಲ್ಲಿ ಬಯಲಾಯ್ತು ನೌಕರರಿಗೆ ಸಿಗುವ ಹಣವೆಷ್ಟೆಂದು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 10:08 IST
Last Updated 20 ಸೆಪ್ಟೆಂಬರ್ 2019, 10:08 IST
railway
railway   

ಬೆಂಗಳೂರು: ಕೇಂದ್ರ ಸರ್ಕಾರರೈಲ್ವೆ ಇಲಾಖೆ ಸಿಬ್ಬಂದಿಗೆ ಬೋನಸ್‌ ಘೋಷಿಸಿದ ರೀತಿಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿದೆ.

ಇದೇನಪ್ಪ ಬೋನಸ್‌ ವಿಚಾರವೂ ಟ್ರೋಲ್‌ ಆಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದೀರಾ? ಇಲ್ಲಿ ಕೇಂದ್ರ ಸರ್ಕಾರ ಬೋನಸ್‌ ಘೋಷಿಸಿದ ರೀತಿ ಟ್ರೋಲ್‌ಗೆ ಗುರಿಯಾಗಿದೆ.

11.52 ಲಕ್ಷ ರೈಲ್ವೆ ನೌಕರರಿಗೆ78 ದಿನಗಳ ವೇತನವನ್ನು ಬೋನಸ್‌ ಆಗಿ ಪಡೆಯಲಿದ್ದಾರೆ ಎನ್ನುವ ಘೋಷಣೆಯನ್ನು ರೈಲ್ವೆ ಸಚಿವ ಪ್ರಕಾಶ್‌ ಜಾವಡೇಕರ್ ಮಾಡಿದರು. ಇದೇನು ಹೊಸದಲ್ಲ, ಅನೇಕ ವರ್ಷಗಳಿಂದ ರೈಲ್ವೆ ಇಲಾಖೆ ತನ್ನ ಸಿಬ್ಬಂದಿ ಬೋಸನ್‌ ನೀಡುತ್ತಿದೆ ಎನ್ನುವುದು ಟ್ರೋಲಿಗರ ವಾದ.

ಟ್ರೋಲ್‌ ಆದ ಬೋನಸ್‌ ವಿಚಾರ ಏನೆಂದರೆ, 78 ದಿನಗಳ ಬೋನಸ್‌ ಎಂದ ಕೂಡಲೇ ಜನ ಲಕ್ಷದ ರೂಪದಲ್ಲಿ ಹಣ ಬರುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ, ಅವರಿಗೆ ಬೋನಸ್‌ ಆಗಿ ಸಿಗುತ್ತಿರುವುದು ₹17,951.

ಕಳೆದ ನಾಲ್ಕು ವರ್ಷಗಳಿಂದ ದೀಪಾವಳಿಗೆ ನೀಡಲಾಗುತ್ತಿರುವ ಬೋನಸ್‌ ಅನ್ನೇ ಈ ವರ್ಷವೂ ಸರ್ಕಾರ ನೀಡುತ್ತದೆ ಇದರಲ್ಲಿ ಹೊಸದೇನಿಲ್ಲ ಎನ್ನುತ್ತದೆ ಟ್ರೋಲ್‌ ಪೋಸ್ಟ್‌.

ಮೂಲ ವೇತನದ ಆಧಾರ ಮೇಲೆಯೇ ಬೋನಸ್‌ ನೀಡಲಾಗುತ್ತದೆ. 7ನೇ ವೇತನ ಆಯೋಗದ ಪ್ರಕಾರ ರೇಲ್ವೆಯಲ್ಲಿ ಕಾರ್ಮಿಕರಿಗೆ ₹18 ಸಾವಿರ ವೇತನವಿದ್ದು, ₹7 ಸಾವಿರ ಮೂಲ ವೇತನ ನಿಗದಿಪಡಿಸಲಾಗಿದೆ. ₹7000 x 12 /365 * 78 = 17,951 ಎಂದೂ ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.