ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಫಲಿತಾಂಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಟ್ರಂಪ್

ಪಿಟಿಐ
Published 10 ಡಿಸೆಂಬರ್ 2020, 7:15 IST
Last Updated 10 ಡಿಸೆಂಬರ್ 2020, 7:15 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ಕಳೆದ ತಿಂಗಳು ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಚುನಾವಣೆ ಫಲಿತಾಂಶ ಪ್ರಕಟಣೆಯ ಸಮಯದಿಂದಲೂ, ಟ್ರಂಪ್ ಅವರು ‘ಮತದಾನದಲ್ಲಿ ಮೋಸ ನಡೆದಿದೆ‘ ಎಂದು ಆರೋಪಿಸುತ್ತಿದ್ದಾರೆ. ಆದರೆ, ‘ಹಾಗೆ ಮೋಸ ನಡೆದಿರುವುದಕ್ಕೆ ಯಾವುದೇ ಆಧಾರ ಇಲ್ಲ‘ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡುವ ಜತೆಗೆ, ಟ್ರಂಪ್ ಅವರ ಆರೋಪಗಳನ್ನು ನಿರಾಕರಿಸಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಟೆಕ್ಸಾಸ್ ಅಟಾರ್ನಿ ಜನರಲ್ ಕೆನ್ ಪಾಕ್ಸ್‌ಟನ್‌ ಅವರು, ‘ಜಾರ್ಜಿಯಾ, ಮಿಷಿಗನ್‌, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್‌ಸಿನ್‌ ಕ್ಷೇತ್ರದಿಂದ ಒಟ್ಟು 62 ಎಲೆಕ್ಟೊರಲ್‌ ಎಲೆಕ್ಟರೋಲ್ ಮತಗಳನ್ನು ಅಮಾನ್ಯಗೊಳಿಸಬೇಕೆಂದು ಒತ್ತಾಯಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಟ್ರಂಪ್ ಕೇಳಿದ್ದರು.

ADVERTISEMENT

‘ನಮ್ಮ ದೇಶವನ್ನು ನಾವು ರಕ್ಷಿಸುತ್ತೇವೆ. ಪ್ರಮುಖ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ನನ್ನ ಪ್ರತಿಸ್ಪರ್ಧಿಗಿಂತ ಸಾವಿರಾರು ಮತಗಳನ್ನು ಹೆಚ್ಚಿಗೆ ಪಡೆದಿದ್ದೇನೆ. ಮತ ಎಣಿಕೆ ನಂತರ ಸಂಗ್ರಹಿಸಿದ ಎಲ್ಲ ಕ್ಷೇತ್ರಗಳ ದತ್ತಾಂಶವನ್ನು ಗಮನಿಸಿದ ಮೇಲೆ ನಾನು ಸೋಲಲು ಸಾಧ್ಯವಿಲ್ಲ ಎಂಬುದು ಖಚಿತವಾಗಿದೆ‘ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

‘ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು, ಚುನಾವಣಾ ಫಲಿತಾಂಶದ ವಿರುದ್ಧ ಟ್ರಂಪ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ‘ ಎಂದು ಟ್ರಂಪ್ ಅವರ ಚುನಾವಣಾ ತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.