ADVERTISEMENT

ನೊಯ್ಡಾ ಎಫ್‌ಐಆರ್‌ನಲ್ಲಿ ರೋಹಿತ್ ಆರೋಪಿ ಅಲ್ಲ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 12:23 IST
Last Updated 6 ಜುಲೈ 2022, 12:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೊಯ್ಡಾ: ಗಾಜಿಯಾಬಾದ್‌ನಲ್ಲಿರುವ ರೋಹಿತ್‌ ಮನೆಗೆ ಭೇಟಿ ನೀಡುವ ಮುನ್ನರಾಹುಲ್‌ ಗಾಂಧಿ ಕುರಿತು ತಿರುಚಿದ ವಿಡಿಯೊ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಝೀ ಸುದ್ದಿ ವಾಹಿನಿ ನಿರೂಪಕನನ್ನು ಆರೋಪಿ ಎಂದು ನಮೂದಿಸಿರಲಿಲ್ಲ.

’ಅರಿವಿದ್ದು ‌ಮತ್ತು ಉದ್ದೇಶಪೂರ್ವಕ‘ವಾಗಿ ರಾಹುಲ್‌ ಗಾಂಧಿ ಹೇಳಿಕೆಯನ್ನು ಸಂಬಂಧಪಡದ ವಿಚಾರಕ್ಕೆ ಬಳಸಿದ ಆರೋಪದ ಮೇರೆಗೆ ಇಬ್ಬರು ನಿರ್ಮಾಪಕರನ್ನು ವಜಾ ಮಾಡಲಾಗಿದೆ ಎಂದು ಸುದ್ದಿವಾಹಿನಿ ಹೇಳಿದೆ.

ಪ್ರಕರಣದಲ್ಲಿ ರೋಹಿತ ಅವರನ್ನು ವಿಚಾರಣೆಗೆ ಕರೆದೊಯ್ಯುವ ಮೊದಲು ನೊಯ್ಡಾ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ಈ ಇಬ್ಬರು ನಿರ್ಮಾಪಕರನ್ನು ಮಾತ್ರ ಆರೋಪಿಗಳೆಂದು ಹೆಸರಿಸಲಾಗಿದೆ.ನಂತರ ಎಫ್‌ಐಆರ್‌ನಲ್ಲಿ ನಿರೂಪಕನ ಹೆಸರನ್ನು ಸೇರಿಸಲಾಗಿದೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಸುದ್ದಿಸಂಸ್ಥೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.