ADVERTISEMENT

ಬೆಂಗಳೂರಿಗೆ ಹೊರಟಿದ್ದ ಬಾಂಗ್ಲಾ ಪ್ರಜೆಗಳು ಪತ್ತೆ: ಸ್ವದೇಶಕ್ಕೆ ವಾಪಸ್‌

ಪಿಟಿಐ
Published 25 ಆಗಸ್ಟ್ 2024, 12:48 IST
Last Updated 25 ಆಗಸ್ಟ್ 2024, 12:48 IST
 ಹಿಮಂತಾ ಬಿಸ್ವಾ ಶರ್ಮಾ–ಪಿಟಿಐ ಚಿತ್ರ
 ಹಿಮಂತಾ ಬಿಸ್ವಾ ಶರ್ಮಾ–ಪಿಟಿಐ ಚಿತ್ರ   

ಗುವಾಹಟಿ: ‘ಬಾಂಗ್ಲಾದೇಶದಿಂದ ಸೂಕ್ತ ದಾಖಲೆಗಳಿಲ್ಲದೇ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಇಬ್ಬರು ವ್ಯಕ್ತಿಗಳನ್ನು ಅಸ್ಸಾಂನಲ್ಲಿ ಪತ್ತೆಹಚ್ಚಲಾಗಿದ್ದು, ಮರಳಿ ಅವರ ದೇಶಕ್ಕೆ ಕಳುಹಿಸಲಾಗಿದೆ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.

‘ಶುಕ್ರವಾರ ರಾತ್ರಿ ಬದರ್‌‍ಪುರ್‌ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಇಬ್ಬರನ್ನು ಮರಳಿ ಅವರ ದೇಶಕ್ಕೆ ಕಳುಹಿಸಲಾಗಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

‘ಢಾಕಾದ ಮೊಂಡೆಲ್‌ಗಂಜ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾಸೂಮ್‌ ಖಾನ್‌, ಸೋನಿಯಾ ಅಖ್ತರ್‌ ಎಂದು ಗುರುತಿಸಲಾಗಿದೆ. ಅವರು ಮಾಧೋಪುರ್‌ ಮಾರ್ಗವಾಗಿ ಅಗರ್ತಲಾ ಮೂಲಕ ಬೆಂಗಳೂರಿಗೆ ಹೊರಟಿದ್ದರು. ಗಡಿ ಭದ್ರತಾ ಪಡೆ, ಅಸ್ಸಾಂ ಪೊಲೀಸರು ಪತ್ತೆ ಹಚ್ಚಿ, ಬಾಂಗ್ಲಾದೇಶಕ್ಕೆ ಮರಳಿ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಕಳೆದೊಂದು ತಿಂಗಳಲ್ಲಿ ಸೂಕ್ತ ದಾಖಲೆಗಳಿಲ್ಲದೇ, ಭಾರತಕ್ಕೆ ಪ್ರವೇಶಿಸಿದ್ದ 30 ಮಂದಿ ಬಾಂಗ್ಲಾದೇಶಿಯರನ್ನು ಪತ್ತೆಹಚ್ಚಿ, ಮರಳಿ ಅವರ ದೇಶಕ್ಕೆ ಕಳುಹಿಸಲಾಗಿದೆ. ಹಿಂದೆ ಕಳುಹಿಸಿದವರೆಲ್ಲರೂ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ನಗರಗಳಲ್ಲಿರುವ ಗಾರ್ಮೆಂಟ್ಸ್‌ ಫ್ಯಾಕ್ಟರಿಗಳಲ್ಲಿ ಕೆಲಸ ಹುಡುಕಿಕೊಂಡು ಹೊರಟಿದ್ದರು’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.