ADVERTISEMENT

ಹರಿಯಾಣ: ಜೈಲಿನಿಂದ ಇಬ್ಬರು ರೈತರ ಬಿಡುಗಡೆ

ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ವಾಪಸ್

ಪಿಟಿಐ
Published 7 ಜೂನ್ 2021, 12:11 IST
Last Updated 7 ಜೂನ್ 2021, 12:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೊಹಾನಾ: ‘ಬಂಧಿತ ಇಬ್ಬರು ರೈತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಕಾರಣ ಹರಿಯಾಣದ ಎಲ್ಲಾ ಪೊಲೀಸ್‌ ಠಾಣೆಗಳ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ’ ಎಂದು ಸಂಯಕ್ತ ಕಿಸಾನ್ ಮೋರ್ಚಾ ಸೋಮವಾರ ತಿಳಿಸಿದೆ.

‘ಆದರೆ, ಟೊಹಾನಾ ಪೊಲೀಸ್ ಠಾಣೆಯಲ್ಲಿ ಮತ್ತೊಬ್ಬ ರೈತ ಬಂಧನದಲ್ಲಿರುವುದರಿಂದ ಇಲ್ಲಿ ಪ್ರತಿಭಟನೆ ಮುಂದುವರಿಯಲಿದೆ’ ಎಂದೂ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ.

ವಾರದ ಹಿಂದೆ ಬಿಜೆಪಿಯ ಶಾಸಕ ದೇವೇಂದ್ರ ಸಿಂಗ್ ಬಾಬ್ಲಿ ಅವರ ನಿವಾಸದ ಮುಂದೆ ಘೇರಾವ್ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಇಬ್ಬರು ರೈತರನ್ನು ಪೊಲೀಸರು ಬಂಧಿಸಿದ್ದರು.

ADVERTISEMENT

‘ಬಂಧಿತ ರೈತರಾದ ರವಿ ಆಜಾದ್ ಮತ್ತು ವಿಕಾಸ್ ಸಿಸರ್ ಅವರಿಗೆ ಜಾಮೀನು ದೊರೆತ ಕಾರಣ ಸೋಮವಾರ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಮತ್ತೊಬ್ಬ ರೈತ ಇನ್ನೂ ಜೈಲಿನಲ್ಲಿದ್ದಾರೆ. ಅವರನ್ನು ಬಿಡಗಡೆ ಮಾಡುವ ತನಕ ನಾವು ಟೊಹಾನಾ ಠಾಣೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಭಾರತೀಯ ಕಿಸಾನ್ ಯೂನಿಯನ್‌ ಮುಖಂಡ ಜೋಗಿಂದರ್ ಘಾಸಿ ರಾಮ್ ನೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.