ADVERTISEMENT

ಗುರುಗ್ರಾಮ: ನಾಲ್ಕು ಮಹಡಿಯ ಕಟ್ಟಡ ಕುಸಿದು ಇಬ್ಬರು ದುರ್ಮರಣ

ಐದು ಮಂದಿ ಸಿಲುಕಿಕೊಂಡಿರುವ ಶಂಕೆ

ಪಿಟಿಐ
Published 25 ಜನವರಿ 2019, 16:04 IST
Last Updated 25 ಜನವರಿ 2019, 16:04 IST
ಕುಸಿದುಬಿದ್ದ ಜಾಗದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿ _ಎಎಫ್‌ಪಿ ಚಿತ್ರ
ಕುಸಿದುಬಿದ್ದ ಜಾಗದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿ _ಎಎಫ್‌ಪಿ ಚಿತ್ರ   

ಗುರುಗ್ರಾಮ: ನಿರ್ಮಾಣ ಹಂತದಲ್ಲಿದ್ದ ನಾಲ್ಕು ಮಹಡಿಯ ಕಟ್ಟಡ ಕುಸಿದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಐದು ಮಂದಿ ಕಟ್ಟಡದ ಒಳಗೆ ಸಿಲುಕಿರುವ ಸಾಧ್ಯತೆಯಿದೆ.

ಇಲ್ಲಿನ ಗುರುಗ್ರಾಮ ಸೆಕ್ಟರ್‌ನ 65ರಲ್ಲಿದ್ದ ಉಲ್ಲಾವಾಸ್‌ ಗ್ರಾಮದಲ್ಲಿ ಕಟ್ಟಡ ಕುಸಿದಿರುವ ಬಗ್ಗೆ ಸ್ಥಳೀಯರು ಬೆಳಿಗ್ಗೆ 5.14ರ ವೇಳೆಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಸುಮಾರು ಒಂದು ತಾಸಿನ ಬಳಿಕ ಇಬ್ಬರು ಕಾರ್ಮಿಕರ ಮೃತದೇಹವನ್ನು ಹೊರತೆಗೆದರು.

’ಕಾಂಕ್ರೀಟ್‌, ಕಬ್ಬಿಣ, ಹೊರತೆಗೆಯುವುದು ರಕ್ಷಣಾ ತಂಡಕ್ಕೂ ಸವಾಲಾಗಿದೆ. ಕಟ್ಟಡ ಕುಸಿದುಬೀಳುವ ಏಳು ಮಂದಿ ಕೆಲಸ ಮಾಡುತ್ತಿದ್ದರು. ಎಲ್ಲರೂ ಕಟ್ಟಡದ ಒಳಗೆ ಸಿಲುಕಿದ್ದಾರೆ‘ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ಇಶಾಂಸಿಂಗ್‌ ತಿಳಿಸಿದರು.

ADVERTISEMENT

ತಕ್ಷಣವೇ ಗಾಜಿಯಾಬಾದ್‌ ಹಾಗೂ ನವದೆಹಲಿಯಿಂದ ವಿಪತ್ತು ನಿರ್ವಹಣಾ ಪಡೆಯ ಎರಡು ತಂಡಗಳನ್ನು ಕರೆಸಿಕೊಳ್ಳಲಾಗಿದೆ.‌ನಾಲ್ಕನೇ ಮಹಡಿಯ ಮೇಲ್ಛಾವಣಿ ನಿರ್ಮಿಸಲು ಕಾಂಕ್ರಿಟ್‌ ತುಂಬುತ್ತಿದ್ದ ವೇಳೆ ಕಟ್ಟಡ ಕುಸಿದುಬಿದ್ದಿದೆ. ಘಟನೆ ನಡೆಯುತ್ತಿದ್ದಂತೆಯೇ, ಮಾಲೀಕ ನಾಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.