ADVERTISEMENT

ಹುಲಿ ದಾಳಿ: ಇಬ್ಬರ ಸಾವು

ಪಿಟಿಐ
Published 27 ಮೇ 2025, 16:13 IST
Last Updated 27 ಮೇ 2025, 16:13 IST
.
.   

ಚಂದ್ರಾಪುರ: ಪ್ರತ್ಯೇಕ ಘಟನೆಗಳಲ್ಲಿ ಪುರುಷ ಮತ್ತು ಮಹಿಳೆ ಹುಲಿ ದಾಳಿಯಿಂದ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.

ಮುಲ್‌ ತಾಲ್ಲೂಕಿನ ಚಿರೋಲಿ ಗ್ರಾಮದ ನಂದಾ ಸಂಜಯ್‌ ಮಕಲವಾರ್‌ (45) ಹಾಗೂ ಕಾಂಟಾಪೇಟೆಯ ಸುರೇಶ್‌ ಸೋಪಾನಕರ್‌ (52) ಮೃತಪಟ್ಟವರು.

ಬಿದಿರಿನ ಬೊಂಬುಗಳನ್ನು ತರಲು ಹೋಗಿದ್ದಾಗ ಹುಲಿ ದಾಳಿ ನಡೆಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.  

ADVERTISEMENT

ತಾಡೋಬಾ ಅಂಧಾರಿ ಹುಲಿ ಸಂರಕ್ಷಿತ (ಟಿಎಟಿಆರ್‌) ಅರಣ್ಯ ವ್ಯಾಪ್ತಿಯಲ್ಲಿ ಈ ತಿಂಗಳಲ್ಲೇ ಹುಲಿ ದಾಳಿಯಿಂದ 11 ಜನರು ಅಸುನೀಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.