ADVERTISEMENT

ಕೋವಿಡ್‌–19 ಯುಜಿಸಿ–ಎನ್‌ಇಟಿ ಪರೀಕ್ಷೆ ಮುಂದೂಡಿಕೆ

ಪಿಟಿಐ
Published 20 ಏಪ್ರಿಲ್ 2021, 12:04 IST
Last Updated 20 ಏಪ್ರಿಲ್ 2021, 12:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪಿಡುಗು ವ್ಯಾಪಕವಾಗುತ್ತಿರುವ ಕಾರಣ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು (ಎನ್‌ಇಟಿ) ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಮಂಗಳವಾರ ಘೋಷಿಸಿದ್ದಾರೆ.

ಮೇ 2ರಿಂದ 17ರ ವರೆಗೆ ಎನ್‌ಇಟಿ ನಿಗದಿಯಾಗಿತ್ತು.

ಎನ್‌ಇಟಿ ನಡೆಸುವ ಪರಿಷ್ಕೃತ ದಿನಾಂಕವನ್ನು ಪರೀಕ್ಷೆ ಆರಂಭಗೊಳ್ಳುವ 15 ದಿನಗಳ ಮೊದಲು ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ತನ್ನ ಆದೇಶದಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.