ADVERTISEMENT

24 ವಿಶ್ವವಿದ್ಯಾಲಯಗಳು ನಕಲಿ, ಕರ್ನಾಟಕದಲ್ಲೂ ಒಂದು ವಿಶ್ವವಿದ್ಯಾಲಯ: ಯುಜಿಸಿ

ಪಿಟಿಐ
Published 7 ಅಕ್ಟೋಬರ್ 2020, 16:10 IST
Last Updated 7 ಅಕ್ಟೋಬರ್ 2020, 16:10 IST
ಯುಜಿಸಿ
ಯುಜಿಸಿ   

ನವದೆಹಲಿ: ‘ದೇಶದಲ್ಲಿ ಮಾನ್ಯತೆ ಪಡೆಯದೆ ಕಾರ್ಯ ನಿರ್ವಹಿಸುತ್ತಿರುವ 24 ವಿಶ್ವವಿದ್ಯಾಲಯಗಳು ನಕಲಿಯಾಗಿವೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬುಧವಾರ ಘೋಷಿಸಿದೆ.ಕರ್ನಾಟಕದ ಬೆಳಗಾವಿಯ ಗೋಕಾಕ್‌ನಲ್ಲಿರುವ ‘ಬಡಗಾಂವಿ ಸರ್ಕಾರ್‌ ವರ್ಲ್ಡ್‌‌ ಒಪನ್‌ ಯೂನಿವರ್ಸಿಟಿ’ಯೂ ಇದರಲ್ಲಿ ಸೇರಿದೆ.

ಉತ್ತರ ಪ್ರದೇಶದ 8, ದೆಹಲಿಯ 7, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಎರಡು, ಕರ್ನಾಟಕ, ಕೇರಳ, ಪುದುಚೇರಿ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ತಲಾ ಒಂದು ವಿಶ್ವವಿದ್ಯಾಲಯಗಳು ಇದರಲ್ಲಿ ಸೇರಿವೆ.

ಈ ವಿಶ್ವವಿದ್ಯಾಲಯಗಳಿಂದ ಪಡೆದ ಮತ್ತು ಪಡೆಯುವ ಪದವಿಗಳು ಮಾನ್ಯವಲ್ಲ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್‌ ಜೈನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.