
ಪ್ರಜಾವಾಣಿ ವಾರ್ತೆ
ನವದೆಹಲಿ: ‘ಸುಮಾರು 2 ಕೋಟಿಗೂ ಅಧಿಕ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ. ಇವುಗಳು ಮೃತಪಟ್ಟವರ ಕಾರ್ಡ್‌ಗಳಾಗಿದ್ದವು’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಹೇಳಿದೆ.
‘ದೇಶದಾದ್ಯಂತ ಅನರ್ಹರ ಹೆಸರಿನಲ್ಲಿರುವ, ಮೃತಪಟ್ಟವರ ಆಧಾರ್ ಕಾರ್ಡ್‌ಗಳನ್ನು ನಮ್ಮ ಡಾಟಾಬೇಸ್‌ನಿಂದ ತೆಗೆದು ಹಾಕುವ ಕಾರ್ಯ ನಡೆಸುತ್ತಿದ್ದೇವೆ. ತಮ್ಮ ಕುಟುಂಬದವರು ಯಾರಾದರೂ ಮೃತಪಟ್ಟರೆ ಅವರ ಮರಣಪತ್ರ ದೊರೆತ ನಂತರ ನಮ್ಮ ವೆಬ್‌ಸೈಟ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡುವ ಅವಕಾಶ ನೀಡಲಾಗಿದೆ’ ಎಂದು ಪ್ರಾಧಿಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.