ADVERTISEMENT

ಉಕ್ರೇನ್‌ನಲ್ಲಿ ವಿದ್ಯುತ್‌, ನೀರು ಸೇವೆ ಮರಳಿ ಪಡೆಯಲು ಹರಸಾಹಸ

ಏಜೆನ್ಸೀಸ್
Published 26 ನವೆಂಬರ್ 2022, 14:28 IST
Last Updated 26 ನವೆಂಬರ್ 2022, 14:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್‌: ರಷ್ಯಾ ಸೇನೆಯ ವೈಮಾನಿಕ ದಾಳಿಯಿಂದ ಉಕ್ರೇನ್‌ನ ಮೂಲಭೂತ ಸೌಕರ್ಯಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಹದೆಗಟ್ಟ ವಿದ್ಯುತ್‌ ಮತ್ತು ನೀರು ಸೇವೆಯನ್ನು ಸರಿಪಡಿಸಲು ಇಲ್ಲಿನ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.

ಪೂರ್ವದಲ್ಲಿ ಉಕ್ರೇನ್‌ ಮತ್ತು ರಷ್ಯಾ ಪಡೆಗಳ ಹೋರಾಟ ಮುಂದುವರಿದಿದೆ. ಇತ್ತ ರಷ್ಯಾ ಭೀಕರ ಕ್ಷಿಪಣಿ, ಬಾಂಬ್‌ ದಾಳಿಯಿಂದ ಕಂಗೆಟ್ಟ ಕೆರ್ಸಾನ್‌ ನಿವಾಸಿಗಳು ಉತ್ತರ ಮತ್ತು ಪಶ್ಚಿಮದ ನಗರಗಳತ್ತ ಪಲಾಯನ ಮಾಡುತ್ತಿದ್ದಾರೆ.

‌‘ಬುಧವಾರದಿಂದ ಇವತ್ತಿನವರೆಗೂ ಕಗ್ಗತ್ತಲಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ಮರಳಿ ವಿದ್ಯುತ್‌ ಸೌಲಭ್ಯ ಕಲ್ಪಿಸಲು ಹರಸಾಹಸಪಡುತ್ತಿದ್ದೇವೆ. ಆದಾಗ್ಯೂ ರಾಜಧಾನಿ ಕೀವ್‌ ಸೇರಿ ಹಲವು ಪ್ರದೇಶಗಳಿಗೆ ವಿದ್ಯುತ್‌ ಸೌಲಭ್ಯವನ್ನು ಮರಳಿ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.