ADVERTISEMENT

ಪಾತಕಿ ಮುಖ್ತಾರ್‌ ಅನ್ಸಾರಿ ಮಗ ಉಮರ್‌ ಕಾಸಗಂಜ್‌ ಕಾರಾಗೃಹಕ್ಕೆ ಸ್ಥಳಾಂತರ

ಪಿಟಿಐ
Published 23 ಆಗಸ್ಟ್ 2025, 15:42 IST
Last Updated 23 ಆಗಸ್ಟ್ 2025, 15:42 IST
.
.   

ಘಾಜಿಪುರ (ಉತ್ತರ ಪ್ರದೇಶ): ಮಾಜಿ ಶಾಸಕ ಹಾಗೂ ಪಾತಕಿ ಮುಖ್ತಾರ್‌ ಅನ್ಸಾರಿ ಅವರ ಮಗ ಉಮರ್‌ ಅನ್ಸಾರಿ ಅವರನ್ನು ಗಾಜಿಪುರ ಕಾರಾಗೃಹದಿಂದ ಕಾಸಗಂಜ್‌ ಜಿಲ್ಲಾ ಕಾರಾಗೃಹಕ್ಕೆ ಶುಕ್ರವಾರ ರಾತ್ರಿ ಸ್ಥಳಾಂತರಿಸಲಾಗಿದೆ.

ಈ ವಿಷಯವನ್ನು ಕೊತವಾಲಿ ಠಾಣಾಧಿಕಾರಿ ದೀನದಯಾಳ್‌ ಪಾಂಡೆ ಖಚಿತಪಡಿಸಿದ್ದಾರೆ.

ಉತ್ತರ ಪ್ರದೇಶ ಗ್ಯಾಂಗ್‌ಸ್ಟರ್‌ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಂಡಿದ್ದ ತನ್ನ ತಂದೆಯ ಆಸ್ತಿಯನ್ನು ಬಿಡುಗಡೆ ಮಾಡುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದಡಿ ಉಮರ್‌ ಅವರನ್ನು ಲಖನೌದಲ್ಲಿ ಆ.3ರಂದು ಬಂಧಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.