ADVERTISEMENT

ಕೇರಳ: ಮಗನ ಡ್ರಗ್ಸ್ ವ್ಯಸನದಿಂದ ಬೇಸರ– ಬೆಂಕಿ ಹಚ್ಚಿಕೊಂಡು ದಂಪತಿ ಆತ್ಮಹತ್ಯೆ!

ಮಗನ ಮಾದಕ ಪದಾರ್ಥಗಳ ವ್ಯಸನದಿಂದ ತೀವ್ರ ಬೇಸತ್ತಿದ್ದ ಹಿರಿಯ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಪಟ್ಟಿನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

ಪಿಟಿಐ
Published 27 ಜುಲೈ 2024, 2:49 IST
Last Updated 27 ಜುಲೈ 2024, 2:49 IST
ಶ್ರೀರಂಗಪಟ್ಟಣ ತಾಲ್ಲೂಕಿನ ಗೌರಿಪುರ ಬಳಿ ಕೇರಳ ಮೂಲದ ಕಾರಿಗೆ ಶನಿವಾರ ಬೆಂಕಿ ಹೊತ್ತಿಕೊಂಡು ಧಗ ಧಗನೆ ಉರಿಯಿತು
ಶ್ರೀರಂಗಪಟ್ಟಣ ತಾಲ್ಲೂಕಿನ ಗೌರಿಪುರ ಬಳಿ ಕೇರಳ ಮೂಲದ ಕಾರಿಗೆ ಶನಿವಾರ ಬೆಂಕಿ ಹೊತ್ತಿಕೊಂಡು ಧಗ ಧಗನೆ ಉರಿಯಿತು   

ಪಟ್ಟಿನಂತಿಟ್ಟ, ಕೇರಳ: ಮಗನ ಮಾದಕ ಪದಾರ್ಥಗಳ ವ್ಯಸನದಿಂದ ತೀವ್ರ ಬೇಸತ್ತಿದ್ದ ಹಿರಿಯ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಪಟ್ಟಿನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ರಾಜು ಥಾಮಸ್ ಜಾರ್ಜ್ (69) ಹಾಗೂ ಅವರ ‍ಪತ್ನಿ ಲೈಗಿ ಥಾಮಸ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಪಟ್ಟಿನಂತಿಟ್ಟದ ವೆಂಗಾಲ ಎಂಬ ಗ್ರಾಮದ ಬಳಿಯ ಹೊಲವೊಂದರಲ್ಲಿ ಈ ದಂಪತಿ ಕಾರಿನಲ್ಲಿ ಕುಳಿತು ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪೊಲೀಸರು ಮನೆಯಲ್ಲಿ ತಪಾಸಣೆ ನಡೆಸಿದಾಗ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ, ‘36 ವರ್ಷದ ನಮ್ಮ ಮಗ ಡ್ರಗ್ಸ್ ವ್ಯಸನಕ್ಕೆ ಸಿಲುಕಿದ್ದ. ಅದರಿಂದ ಹೊರ ತರಲು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಇಡುಕ್ಕಿ ಜಿಲ್ಲೆಯ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದರೂ ಆತ ವ್ಯಸನದಿಂದ ಹೊರ ಬರಲಾಗುತ್ತಿಲ್ಲ. ನಮ್ಮ ಎಲ್ಲ ಆಸ್ತಿಯನ್ನು ನಮ್ಮ ಸೊಸೆ ಹಾಗೂ ಮೊಮ್ಮಗಳಿಗೆ ಹಸ್ತಾಂತರಿಸಿದ್ದೇವೆ’ ಎಂದು ಬರೆಯಲಾಗಿದೆ.

ಮೊದಲು ಪೊಲೀಸರಿಗೆ ಶವಗಳು ಗುರುತು ಸಿಕ್ಕಿರಲಿಲ್ಲ. ಬಳಿಕ ಕಾರಿನ ನೋಂದಣಿ ಸಂಖ್ಯೆ ಪರಿಶೀಲಿಸಿ ಅದರ ಮೂಲಕ ಮೃತರ ಗುರುತನ್ನು ಪತ್ತೆ ಮಾಡಲಾಯಿತು. ರಾಜು ಅವರ ಮಗ ವಿದೇಶದಲ್ಲಿ ಕೆಲವು ವರ್ಷ ಕೆಲಸ ಮಾಡಿ ಇತ್ತೀಚಿನ ವರ್ಷಗಳಲ್ಲಿ ಊರಿಗೆ ಬಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.